ಫ್ಯೂಚರ್ ಸಮೂಹದ ರಿಟೇಲ್ ಮತ್ತು ಸಗಟು, ಗೋದಾಮು ಹಾಗೂ ಸರಕು ಸಾಗಣೆ ವಹಿವಾಟುಗಳ ಖರೀದಿಗೆ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಮಂಡಿಸಿರುವ ಪ್ರಸ್ತಾವನೆಗೆ ಭಾರತೀಯ ಸ್ಪರ್ಧಾ ಆಯೋಗ ಒಪ್ಪಿಗೆ ನೀಡಿದೆ. ೨೪,೭೧೩ ಕೋಟಿ ರೂ. ಮೊತ್ತದ ಖರೀದಿ ಘೋಷಣೆಯು ಆಗಸ್ಟ್ನಲ್ಲಿ ಹೊರಬಿದ್ದಿದೆ. ಈ ಖರೀದಿಯ ನಂತರ ರಿಲಯನ್ಸ್ ಸಮೂಹದ ರಿಟೇಲ್ ವಹಿವಾಟುಗಳಿಗೆ ಹೆಚ್ಚಿನ ಬಲ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಫ್ಯೂಚರ್ ಸಮೂಹ ಮತ್ತು ರಿಲಯನ್ಸ್ ನಡುವಣ ಈ ಒಪ್ಪಂದವನ್ನು ಅಮೆಜಾನ್ ವಿರೋಧಿಸಿದೆ. ಅಮೆಜಾನ್ ಕಂಪನಿಯು ಫ್ಯೂಚರ್ ಸಮೂಹದ ಕೆಲವು ಕಂಪನಿಗಳಲ್ಲಿ ಶೇ.೪೯ರಷ್ಟು ಪಾಲು ಹೊಂದಿದೆ. ಫ್ಯೂಚರ್ ರಿಟೇಲ್ ಲಿಮಿಟೆಡ್ ಕಂಪನಿಯನ್ನು ಖರೀದಿಸುವ ಹಕ್ಕು ಕೂಡ ತನಗೆ ಇದೆ ಎಂದು ಅಮೆಜಾನ್ ಹೇಳುತ್ತಿದೆ.
Courtesyg: Google (photo)