ಬ್ರಿಟನ್ನಿಂದ ವಾಪಸಾದ 20 ಮಂದಿಯಲ್ಲಿ ರೂಪಾಂತರಗೊAಡ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸೋಂಕಿತರ ಸಹಪ್ರಯಾಣಿಕರು, ಕುಟುಂಬದವರು ಹಾಗೂ ಸ್ನೇಹಿತರನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದೆ. ಪ್ರಯಾಣಿಕರ ವಿಮಾನಗಳ ಹಾರಾಟಕ್ಕೆ ನಿರ್ಬಂಧವನ್ನು ಜ.31ರವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಬುಧವಾರ ತಿಳಿಸಿದೆ. ಒಪ್ಪಿಗೆನೀಡಿರುವಆಯ್ದ ಮಾರ್ಗಗಳಲ್ಲಿ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಮುಂದುವರಿಯಲಿದೆ.
ಪಿಡುಗಿನಿAದಾಗಿ ಮಾ.23ರಿಂದ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿತ್ತು. ವಂದೇ ಭಾರತ್ ಮಿಷನ್ನಡಿ ಮೇ ತಿಂಗಳಲ್ಲಿ ವಿದೇಶಗಳಿಗೆ ವಿಶೇಷ ವಿಮಾನ ಹಾರಿಸಲಾಗಿತ್ತು. ಆನಂತರ ಅಮೆರಿಕ, ಯುಎಇ, ಫ್ರಾನ್ಸ್ ಸೇರಿ 24 ದೇಶಗಳ ಜೊತೆಗೆ ಏರ್ ಬಬಲ್ ಒಪ್ಪಂದ ಮಾಡಿಕೊಂಡು, ಅಂತಾರಾಷ್ಟಿçÃಯ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಲಾಗಿತ್ತು.
Courtesyg: Google (photo)