ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿPಯಿಂದ ೫೬-೬೯ ಹಾಗೂ೭೦ ವರ್ಷದ ಮೇಲಿನ ಆರೋಗ್ಯವಂತರಲ್ಲಿ ಪ್ರಬಲ ರೋಗನಿರೋಧಕ ಪ್ರತಿಕ್ರಿಯೆ ಕಂಡುಬAದಿದೆ. ಲ್ಯಾನ್ಸೆಟ್ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿ ಪ್ರಕಾರ, ೫೬೦ ಕ್ಕೂ ಅಧಿಕ ಆರೋಗ್ಯವಂತ ಸ್ವಯಂಸೇವಕರ ಮೇಲೆ ಲಸಿಕೆ ಪ್ರಯೋಗಿಸಲಾಗಿದೆ. ಕೋವಿಡ್ನಿಂದ ಹೆಚ್ಚು ಅಪಾಯಕ್ಕೊಳಗಾಗುತ್ತಿದ್ದ ೬೦ ವರ್ಷ ಮೀರಿದವರಲ್ಲಿ ಲಸಿಕೆ ಪರಿಣಾಮಕಾರಿಯಾಗಿದೆ. ಮೂರನೇ ಹಂತದ ಪ್ರಯೋಗದಲ್ಲಿ ಲಸಿಕೆ ಕೋವಿಡ್ನ್ನು ತಡೆಯುವ ಸಾಮರ್ಥ್ಯ ಹೊಂದಿದೆಯೇ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ. ಫಲಿತಾಂಶ ಕೆಲ ವಾರಗಳಲ್ಲಿ ಬರಲಿದೆ. ಯುವಜನರಲ್ಲೂ ಲಸಿಕೆ ರೋಗನಿರೋಧಕ ಶಕ್ತಿ ಹೆಚ್ಚಿಸಿದೆ ಎಂದು ಸಂಶೋಧನಾ ತಂಡದ ಡಾ.ಮಹೇಶಿ ರಾಮಸ್ವಾಮಿ ತಿಳಿಸಿದ್ದಾರೆ.
Courtesyg: Google (photo)