ಜನಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಆರೋಗ್ಯ ವಿಮೆಯನ್ನು ವಾಟ್ಸ್ಆ್ಯಪ್ ಮೂಲಕ ಖರೀದಿಸುವ ಸೌಲಭ್ಯ ತಿಂಗಳಾAತ್ಯ ಲಭ್ಯವಾಗಲಿದೆ. ಎಸ್ಬಿಐ ಜನರಲ್ ಆರೋಗ್ಯ ವಿಮೆ ಖರೀದಿ ವರ್ಷಾಂತ್ಯ ಲಭ್ಯವಾಗಲಿದೆ. ಎಚ್ಡಿಎಫ್ಸಿ ಪಿಂಚಣಿ ಮತ್ತು ಪಿನ್ಬಾಕ್ಸ್ ಜೊತೆ ಒಪ್ಪಂದ ಮಾಡಿಕೊಂಡು, ನಿವೃತ್ತಿ ನಂತರದ ಬದುಕಿಗೆ ಉಳಿತಾಯದ ಸೌಲಭ್ಯವನ್ನೂ ನೀಡಲಾಗುವುದು. ಭಾರತದ ಬಳಕೆದಾರರಿಗೆ ನಾನಾ ಹಣಕಾಸು ಸೇವೆಗಳನ್ನು ಒದಗಿಸುವ ಪ್ರಯತ್ನದ ಒಂದು ಭಾಗ ಇದು ಎಂದು ವಾಟ್ಸ್ಆ್ಯಪ್ ತಿಳಿಸಿದೆ. 40 ಕೋಟಿಗಿಂತ ಅಧಿಕ ಬಳಕೆದಾರರಿರುವ ಭಾರತ ಅತಿ ದೊಡ್ಡ ಮಾರುಕಟ್ಟೆ. ಸರಳ, ವಿಶ್ವಾಸಾರ್ಹ ಹಾಗೂ ಖಾಸಗಿ ಸಂವಹನವನ್ನು ಕಲ್ಪಿಸುವುದು ನಮ್ಮ ಪ್ರಾಥಮಿಕ ಆದ್ಯತೆ ಆಗಿರಲಿದೆ ಎಂದು ವಾಟ್ಸ್ಆ್ಯಪ್ ಇಂಡಿಯಾ ಮುಖ್ಯಸ್ಥ ಅಭಿಜಿತ್ ಬೋಸ್ ಹೇಳಿದ್ದಾರೆ.
Courtesyg: Google (photo)