ರಾಜ್ಯದ ಅನೇಕ ಜಿಲ್ಲೆಗಳು ಮಹಾಪೂರದಿಂದ ಸಂಕಷ್ಟಕ್ಕೆ ಸಿಲುಕಿವೆ. ಅದರಿಂದ ಸುಧಾರಿಸಿಕೊಳ್ಳುವ ಮುನ್ನವೇ ಬಂಗಾಳ ಕೊಲ್ಲಿಯಲ್ಲಿ ಮತ್ತೊಮ್ಮೆ ವಾಯುಭಾರ ಕುಸಿತಗೊಂಡಿದ್ದು, ಮತ್ತೆ ಮಹಾಪೂರದ ಸಾಧ್ಯತೆ ಹೆಚ್ಚಳಗೊಂಡಿದೆ. ‘ಲಾ ನಿನಾ’ ಪರಿಣಾಮದಿಂದ ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ೧೨ ಬಾರಿ ವಾಯುಭಾರ ಕುಸಿದಿದೆ. ಇದು ಅತಿ ವಿರಳ ವಿದ್ಯಮಾನ. ಅಕ್ಟೋಬರ್‌ನಲ್ಲೇ ಮೂರು ಬಾರಿ ವಾಯುಭಾರ ಕುಸಿತವಾಗಿದ್ದು, ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ರಾಜ್ಯಗಳು ಮಳೆ ಮತ್ತು ಪ್ರವಾಹಕ್ಕೆ ತುತ್ತಾಗಿದ್ದವು. ‘ಲಾ ನಿನಾ’ ಅತ್ಯಂತ ಅಪರೂಪದ ಹವಾಮಾನ ವಿದ್ಯಮಾನ. ಪೆಸಿಫಿಕ್ ಸಾಗರದಲ್ಲಿನ ವ್ಯತ್ಯಾಸದಿಂದಾಗಿ ತೀರಾ ಶೀತಲ ವಾತಾವರಣ ನಿರ್ಮಾಣವಾಗುತ್ತದೆ. ತಾಪಮಾನ ತೀವ್ರವಾಗಿ ಕುಸಿದಿರುವುದರಿಂದ ವಾಯುಭಾರ ಕುಸಿತವೂ ಪದೇಪದೇ ಸಂಭವಿಸುತ್ತ್ತಿದೆ: ಇದು ಮಳೆಗೆ ಕಾರಣವಾಗುತ್ತಿದೆ. ಈ ವರ್ಷ ಅಂದಾಜು ೧೨ ಬಾರಿ ವಾಯುಭಾರ ಕುಸಿದಿದೆ.ರಾಜ್ಯದಲ್ಲಿ ಮಳೆ ವ್ಯಾಪಕವಾಗಿ ಸುರಿದಿದ್ದು, ಕಳೆದ ೬೦ ವರ್ಷಗಳಲ್ಲಿ ಮೊದಲ ಬಾರಿಗೆ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಮಳೆ ಕೊರತೆ ಉಂಟಾಗಿಲ್ಲ. ೨೦೧೮ ಮತ್ತು ೨೦೧೯ರಲ್ಲಿ ಭಾರಿ ಮಳೆ ಆಗಿದ್ದರೂ, ೩೦ ರಿಂದ ೩೫ ತಾಲೂಕುಗಳಲ್ಲಿ ಮಳೆ ಕೊರತೆ ಇದ್ದಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ. ಲಾ ನಿನಾ ಪರಿಣಾಮ ಎಂದರೇನು? ‘ಲಾ ನಿನಾ’ ಪರಿಣಾಮ ‘ಎಲ್ ನಿನೊ’ಗೆ ಸಂಪೂರ್ಣ ತದ್ವಿರುದ್ಧವಾದುದು. ‘ಎಲ್ ನಿನೊ’ ಇದ್ದಾಗ ಬರ ಕಾಣಿಸಿಕೊಳ್ಳುತ್ತದೆ. ಫೆಸಿಫಿಕ್ ಸಾಗರದ ಮೇಲೆ ತಾಪಮಾನ ಹೆಚ್ಚಾಗುವುದರಿಂದ ಎಲ್ ನಿನೊ ಪರಿಣಾಮ ಆಗಲಿದ್ದು, ಅತ್ಯಂತ ಸಂಕೀರ್ಣವೆನಿಸುವ ನೈಸರ್ಗಿಕ ವಿದ್ಯಮಾನ ಜರುಗಿದಾಗ ಜಾಗತಿಕವಾಗಿ ಹವಾಮಾನದಲ್ಲಿ ಬದಲಾವಣೆ ಆಗಿ ಶೀತಲ ವಾತಾವರಣ ನಿರ್ಮಾಣವಾಗುತ್ತದೆ. ಇದೇ ‘ಲಾ ನಿನಾ’ ಪರಿಣಾಮ. ‘ಲಾ ನಿನಾ’ ಪರಿಣಾಮದಲ್ಲಿ ಫೆಸಿಫಿಕ್ ಸಾಗರ ಮೇಲೆ ಪಶ್ಚಿಮಾಭಿಮುಖವಾಗಿ ಅಂದರೆ ಏಷ್ಯಾ ಕಡೆಯಿಂದ ದಕ್ಷಿಣ ಅಮೆರಿಕಾದ ಕಡೆಗೆ ಗಾಳಿ ಬೀಸಲಾರಂಭಿಸುತ್ತದೆ. ಸಾಗರದ ಮೇಲ್ಮೈ ಮೇಲೆ ಬೆಚ್ಚಗಿನ ನೀರಿನ ಮೇಲೆ ಗಾಳಿ ಹಾದು ಹೋಗುತ್ತದೆ. ಹೀಗೆ ಬೆಚ್ಚಗಿನ ನೀರು ಚಲಿಸಲು ಆರಂಭವಾಗುತ್ತಿದ್ದAತೆ, ಶೀತಲ ನೀರು ಮೇಲಕ್ಕೆ ಬರುತ್ತದೆ. ಇದರಿಂದ ಫೆಸಿಫಿಕ್ ಸಾಗರದ ಪೂರ್ವ ಭಾಗದಲ್ಲಿ ನೀರು ಸಾಮಾನ್ಯಕ್ಕಿಂತ ಹೆಚ್ಚು ಶೀತಲವಾಗುತ್ತದೆ. ಚಳಿಗಾಲದಲ್ಲಿ ಗಾಳಿಯೂ ಪ್ರಬಲವಾಗಿ ಬೀಸುತ್ತದೆ.
Courtesyg: Google (photo)