ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಗಾಳಿಯ ಗುಣಮಟ್ಟದ ಮೇಲೆ ನಿಗಾ ಇರಿಸುವ ಕೇಂದ್ರ ಇರಬೇಕು.ಇಂಥ ಕೇಂದ್ರಗಳನ್ನು ಮೂರು ತಿಂಗಳೊಳಗೆ ಸ್ಥಾಪಿಸಬೇಕು ಎಂದು ರಾಷ್ಟ್ರೀಯ ಹಸಿರು ಪೀಠ ಆದೇಶಿಸಿದೆ. ನ್ಯಾ. ಆದರ್ಶ ಕುಮಾರ್ ಗೋಯಲ್ ಅವರ ನೇತೃತ್ವದ ಎನ್ಜಿಟಿಯ ಪ್ರಧಾನ ಪೀಠ, ಗಾಳಿಯ ಗುಣಮಟ್ಟ ಪರಿಶೀಲನೆ ವ್ಯವಸ್ಥೆ ಇಲ್ಲದಿರುವ ಜಿಲ್ಲೆಗಳಲ್ಲಿ ಕನಿಷ್ಠ ಪಕ್ಷ ಮನುಷ್ಯರು ನಿರ್ವಹಿಸುವ ನಿಗಾ ವ್ಯವಸ್ಥೆಯನ್ನು ಸ್ಥಾಪಿಸಬೇಕು. ನಿಗಾ ವ್ಯವಸ್ಥೆಯನ್ನು ಆರಂಭಿಸುವುದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜವಾಬ್ದಾರಿ. ಗಾಳಿಯ ಗುಣಮಟ್ಟ ಸೂಚ್ಯಂಕ, ಪಿಎಂ(ಮಲಿನ ಕಣ) 2.5 ಮತ್ತು ಪಿಎಂ 10ರ ಕುರಿತ ಮಾಹಿತಿ ಇದರಲ್ಲಿ ಇರಬೇಕು. ಮಾಹಿತಿಯನ್ನು ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಬೇಕು ಎಂದು ಆದೇಶ ಹೇಳಿದೆ.
ದೇಶದಲ್ಲಿ 740 ಜಿಲ್ಲೆ ಹಾಗೂ ನಾಲ್ಕು ಸಾವಿರಕ್ಕೂ ಅಧಿಕ ನಗರಗಳಿವೆ. ಪ್ರತಿ ಜಿಲ್ಲಾ ಕೇಂದ್ರದಲ್ಲೂ ಗಾಳಿಯ ಗುಣಮಟ್ಟ ಅಳೆಯುವ ಕನಿಷ್ಠ ಒಂದು ಕೇಂದ್ರ ಇರುವುದು ಅತ್ಯಗತ್ಯ. ಮಾಲಿನ್ಯದಿಂದ ತೊಂದರೆಗೊಳಗಾದವರು ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗೆ ಅರ್ಜಿ ಕೊಡಬಹುದು. ಹಾನಿಗೆ ಸಾಕ್ಷ್ಯವನ್ನು ಒದಗಿಸಬೇಕು ಮತ್ತು ಯಾರು ಕಾರಣ ಯಾರು ಎಂಬುದನ್ನು ತಿಳಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
Courtesyg: Google (photo)