ವಾಹನಗಳ ಸಗಟು ಮಾರಾಟ ಕಳೆದ ನವೆಂಬರ್‌ಗೆ ಹೋಲಿಸಿದರೆ ಶೇ.12.73ರಷ್ಟು ಹೆಚ್ಚಳ ಕಂಡಿದೆ. ನ.2019ರಲ್ಲಿ 2.53 ಲಕ್ಷ ಪ್ರಯಾಣಿಕ ವಾಹನಗಳ ಮಾರಾಟ ಆಗಿತ್ತು. ಈ ವರ್ಷ ಒಟ್ಟು 2.85 ಲಕ್ಷ ವಾಹನಗಳ ಮಾರಾಟ ನಡೆದಿದೆ ಎಂದು ಭಾರತೀಯ ಆಟೊಮೊಬೈಲ್ ತಯಾರಕರ ಒಕ್ಕೂಟ ಹೇಳಿದೆ.
ದ್ವಿಚಕ್ರ ವಾಹನಗಳ ಮಾರಾಟ ನವೆಂಬರ್‌ನಲ್ಲಿ ಶೇ.13.43ರಷ್ಟು ಹೆಚ್ಚಳ ಹಾಗೂ ತ್ರಿಚಕ್ರ ವಾಹನಗಳ ಮಾರಾಟದಲ್ಲಿ ಶೇ.57.64 ರಷ್ಟು ಇಳಿಕೆ ಕಂಡುಬAದಿದೆ. ನವೆಂಬರ್‌ನಲ್ಲಿ ಹಬ್ಬದ ಹಿನ್ನೆಲೆಯಲ್ಲಿ ಸಗಟು ಮಾರಾಟದಲ್ಲಿ ಹೆಚ್ಚಳ ಆಗಿದೆ ಎಂದು ಸಿಯಾಮ್ ಮಹಾನಿರ್ದೇಶಕ ರಾಜೇಶ್ ಮೆನನ್ ಹೇಳಿದ್ದಾರೆ. ನವೆಂಬರ್‌ನಲ್ಲಿ ತಯಾರಾದ ಪ್ರಯಾಣಿಕ ವಾಹನಗಳ ಒಟ್ಟು ಸಂಖ್ಯೆ 23.19 ಲಕ್ಷ. ಕಳೆದ ವರ್ಷ 22.58 ಲಕ್ಷ ಪ್ರಯಾಣಿಕ ವಾಹನಗಳನ್ನು ತಯಾರಿಸಲಾಗಿತ್ತು. ತಯಾರಿಕೆಯಲ್ಲಿ ಶೇ.2.73 ರಷ್ಟು ಹೆಚ್ಚ¼ವಾಗಿದೆ ಎಂದು ಸಿಯಾಮ್ ಹೇಳಿದೆ.
Courtesyg: Google (photo)