ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ನವರಾತ್ರಿ ವೇಳೆ ಮಾರುತಿ ಸುಜುಕಿ ಸೇರಿದಂತೆ ಕೆಲವು ಪ್ರಮುಖ ಕಂಪನಿಗಳ ರಿಟೇಲ್ ಮಾರಾಟದಲ್ಲಿ ಏರಿಕೆ ಆಗಿದೆ. ಮಾರುತಿ ಸುಜುಕಿ ಇಂಡಿಯಾದ ರಿಟೇಲ್ ಮಾರಾಟ ಶೇ.27ರಷ್ಟು ಹೆಚ್ಚಿದ್ದು, 96,700 ವಾಹನಗಳು ಮಾರಾಟವಾಗಿವೆ ಎಂದು ಕಂಪನಿಯ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ತಿಳಿಸಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 76 ಸಾವಿರ ವಾಹನಗಳು ಮಾರಾಟವಾಗಿದ್ದವು. ಹುಂಡೈ ಮೋಟರ್ ಶೇ.೨೮ ರಷ್ಟು ಹೆಚ್ಚಾಗಿದೆ. ಟಾಟಾ ಮೋಟರ್ಸ್ನ ಮಾರಾಟ ಶೇ.೯೦ರಷ್ಟು ಹೆಚ್ಚಾಗಿದೆ. ಹೊಸ ಕಾರು ಮತ್ತು ಯುವಿಗಳಿಗೆ ಬೇಡಿಕೆ ಬಂದಿದೆ. ಕಿಯಾ ಮೋಟರ್ಸ್ 11,640 ವಾಹನ ಮಾರಾಟ ಮಾಡಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.೨೨೪ರಷ್ಟು ಹೆಚ್ಚಳ.ಟೊಯೋಟಾ ಕಿರ್ಲೋಸ್ಕರ್ ಮೋಟರ್ ಕಂಪನಿಯ ಮಾರಾಟದಲ್ಲಿ ಶೇ.೧೩ರಷ್ಟು ಏರಿಕೆಯಾಗಿದೆ. ಎಸ್‌ಯುವಿ ಮತ್ತು ಎಸ್‌ಸಿವಿ ಮಾರಾಟ ಕಳೆದ ವರ್ಷಕ್ಕಿಂತ ಉತ್ತಮವಾಗಿದೆ ಎಂದು ಮಹೀಂದ್ರ ಆಂಡ್ ಮಹೀಂದ್ರ ಕಂಪನಿ ತಿಳಿಸಿದೆ. ಮಾರಾಟದಲ್ಲಿ ಶೇ.೧೦ರಷ್ಟು ಹೆಚ್ಚಳ ಆಗಿದೆ ಎಂದು ಹೋಂಡಾ ಕರ‍್ಸ್ ಇಂಡಿಯಾ ತಿಳಿಸಿದೆ.
Courtesyg: Google (photo)