ದೇಶದ ವೃತ್ತಿ ಕ್ಷೇತ್ರದಲ್ಲಿ ಮಹಿಳೆಯರ ಪಾಲು ಶೇ.೨೫ರಷ್ಟಿದ್ದು, ಜಾಗತಿಕ ಪ್ರಮಾಣ ಶೇ.೪೯ ಎಂದು ವಾಧ್ವಾನಿ ಫೌಂಡೇಶನ್‌ನ ಅಧ್ಯಯನ ತಿಳಿಸಿದೆ. ಮಹಿಳಾ ಉದ್ಯಮಶೀಲತೆ ದಿನ ಎಂದು ಆಚರಿಸಲ್ಪಡುವ ನ.೧೯ರಂದು ಸಂಸ್ಥೆ ಈ ಮಾಹಿತಿ ಬಿಡುಗಡೆಗೊಳಿಸಿದೆ. ದೇಶ ಮಹಿಳಾ ಉದ್ಯಮಿಗಳ ಪ್ರತಿಭೆಯನ್ನು ಬಳಸಿಕೊಂಡಿಲ್ಲ. ಈ ದೆಸೆಯಲ್ಲಿ ಕೆಲಸ ಮಾಡುವುದು ಈಗಿನ ಅಗತ್ಯ ಎಂದು ಭಾರತ ಮತ್ತು ಇತರ ದೇಶಗಳಲ್ಲಿ ಉದ್ಯಮಶೀಲತೆ ವ್ಯವಸ್ಥೆ ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿರುವ ಸಂಸ್ಥೆ ಹೇಳಿದೆ. ದೇಶದಲ್ಲಿ ಉದ್ಯಮಶೀಲತೆ ಬೆಳೆಯುತ್ತಿದ್ದರೂ, ಮಹಿಳೆಯರ ಪ್ರಮಾಣ ಕಡಿಮೆ ಇದೆ.ಗ್ರಾಮೀಣ ಪ್ರದೇಶಕ್ಕೂ ಆದ್ಯತೆ ನೀಡಿ, ಬೆಂಬಲ ವ್ಯವಸ್ಥೆ ಮತ್ತು ಸಮಗ್ರ ಕರ‍್ಯನೀತಿ ರೂಪಿಸಬೇಕು. ದೇಶದಲ್ಲಿ ೬.೩ ಕೋಟಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿವೆ. ಇದರಲ್ಲಿ ಶೇ.೬ರಷ್ಟು ಮಾತ್ರ ಮಹಿಳೆಯರ ಮುಂದಾಳತ್ವದಲ್ಲಿ ನಡೆಯುತ್ತಿವೆ ಎಂದು ಸಂಸ್ಥೆ ಹೇಳಿದೆ.
Courtesyg: Google (photo)