ವೊಡಾಫೋನ್ ಐಡಿಯಾ(ವಿಐ) ಕಂಪನಿ ಚಂದಾದಾರರನ್ನು ಕಳೆದುಕೊಳ್ಳುತ್ತಿದ್ದು, ನೆಟ್‌ವರ್ಕ್ ಗುಣಮಟ್ಟ ವರ್ಧನೆಗೆ ಹೆಚ್ಚು ಹೂಡಿಕೆ ಮಾಡಲು ಆಗುತ್ತಿಲ್ಲ. ಜತೆಗೆ, ಕಂಪನಿ ಸಾಲದ ಹೊರೆ ಯಿಂದ ಬಳಲಿದ್ದು, ಉಳಿದ ಕಂಪನಿಗಳೊಂದಿಗೆ ಪೈಪೋಟಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿ ೭,೨೧೮ ಕೋಟಿ ರೂ. ನಷ್ಟ ಅನುಭವಿಸಿದೆ. ೧,೧೫,೯೪೦ ಕೋಟಿ ರೂ. ಸಾಲ ಇದೆ. ವೊಡಾಫೋನ್ ಐಡಿಯಾ ಹೊಂದಾಣಿಕೆ ಮಾಡಿದ ವರಮಾನ(ಎಜಿಆರ್)ದ ಒಟ್ಟು ಬಾಕಿ ೬೫,೪೪೦ ಕೋಟಿ ರೂ. ದೂರಸಂಪರ್ಕ ಇಲಾಖೆಗೆ ನೀಡಬೇಕಿದೆ. ಈ ಬಾಕಿ ಪಾವತಿ ಅವಧಿ ವಿಸ್ತರಣೆಯಾಗಿದ್ದರೂ, ಬಂಡವಾಳ ಹೂಡಿಕೆ, ಮೊಬೈಲ್ ಸೇವಾ ಶುಲ್ಕ ಹೆಚ್ಚಳ ಮತ್ತು ಮೊಬೈಲ್ ಸೇವೆಗಳಿಗೆ ಕನಿಷ್ಠ ಶುಲ್ಕ ಜಾರಿಗೊಳಿಸುವಿಕೆ ಮೇಲೆ ಕಂಪನಿಯ ಭವಿಷ್ಯ ನಿರ್ಧಾರವಾಗಲಿದೆ’ ಎಂದು ಐಸಿಐಸಿಐ ಸೆಕ್ಯುರಿಟೀಸ್ ವರದಿ ಹೇಳಿದೆ. ೨೫ ಸಾವಿರ ಕೋಟಿ ರೂ. ಬಂಡವಾಳ ಸಂಗ್ರಹಿಸಲು ಕಂಪನಿಯ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಟಕ್ಕರ್ ಪ್ರಕಾರ, ಮುಂದಿನ ಮೂರರಿಂದ ನಾಲ್ಕು ತಿಂಗಳುಗಳಲ್ಲಿ ಬಂಡವಾಳ ಸಂಗ್ರಹವಾಗಲಿದೆ. ಕಂಪನಿಯ ಸಕ್ರಿಯ ಚಂದಾದಾರರ ಸಂಖ್ಯೆ ೧.೧೮ಕೋಟಿಯಷ್ಟು ಇಳಿಕೆಯಾಗಿದ್ದು, ೨೬.೧೨ ಕೋಟಿಗೆ ತಲುಪಿದೆ. ಕಂಪನಿಯ ಮಾರುಕಟ್ಟೆ ಪಾಲು ಕಡಿಮೆ ಆಗುವುದಿಲ್ಲ ಎಂದುಕೊAಡರೂ, ಪ್ರತಿ ಗ್ರಾಹಕನಿಂದ ಕಂಪನಿಗೆ ದೊರೆಯುವ ಆದಾಯ(ಎಆರ್‌ಪಿಯು) ಶೇ. ೭೦ ರಷ್ಟು ಹೆಚ್ಚಬೇಕು. ಆಗ ಮಾತ್ರವಷ್ಟೇ ೨೦೨೨ಕ್ಕೆ ಎಜಿಆರ್/ ಬಡ್ಡಿ ಪಾವತಿ, ಬಂಡವಾಳ ಹೂಡಿಕೆ ಸಾಧ್ಯವಾಗುತ್ತದೆ. ಆದರೆ, ನೆಟ್‌ವರ್ಕ್ ಗುಣಮಟ್ಟದ ಸಮಸ್ಯೆಯಿಂದ ಚಂದಾದಾರರು ಕಡಿಮೆಯಾಗುತ್ತಿರುವುದರಿಂದ ಎಆರ್‌ಪಿಯು ಸುಧಾರಣೆ ಕಷ್ಟ’ ಎಂದು ವರದಿ ತಿಳಿಸಿದೆ.
Courtesyg: Google (photo)