ದೇಶದ ಷೇರುಪೇಟೆಗಳು ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದವು. ಬ್ಯಾಂಕಿಂಗ್ ಮತ್ತು ಐಟಿ ವಲಯದ ಷೇರುಗಳ ಗಳಿಕೆ ಸೂಚ್ಯಂಕಗಳ ಏರಿಕೆಗೆ ನೆರವಾದವು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 249 ಅಂಶ ಹೆಚ್ಚಾಗಿ, 47,613 ಹಾಗೂ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ(ನಿಫ್ಟಿ) 59 ಅಂಶಗಳ ಏರಿಕೆಯೊಂದಿಗೆ 13,932 ಅಂಶ ತಲುಪಿತು. ಬ್ಯಾಂಕಿಂಗ್ ಶೇ .1.41, ಹಣಕಾಸು ಶೇ.1.06 ಹಾಗೂ ಐ.ಟಿ ಶೇ.0.65 ರಷ್ಟು ಏರಿಕೆ ದಾಖಲಿಸಿದವು. ವಿದೇಶಿ ಹೂಡಿಕೆದಾರರು ಮಂಗಳವಾರ 23,490 ಕೋಟಿರೂ.ಮೌಲ್ಯದ ಷೇರುಗಳನ್ನುಖರೀದಿಮಾಡಿದ್ದಾರೆ. ಡಾಲರ್ ಎದುರು ರೂಪಾಯಿ ಮೌಲ್ಯ7 ಪೈಸೆ ಹೆಚ್ಚಳಗೊಂಡು, ಡಾಲರ್‌ಗೆ 73.42 ರೂ.ವಿನಿಮಯಗೊಂಡಿತು.
Courtesyg: Google (photo)