ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದ್ದು, ಹಣಕಾಸು ವಲಯದ ಷೇರುಗಳು ಇಳಿಕೆ ಕಂಡಿವೆ. ಮಧ್ಯಂತರ ವಹಿವಾಟಿನಲ್ಲಿ ಗರಿಷ್ಠ ಮಟ್ಟ ೪೪,೨೩೦ ಅಂಶ ತಲುಪಿದ್ದ ಮುಂಬೈ ಷೇರುಪೇಟೆ ಸೂಚ್ಯಂಕ, ೫೮೦ ಅಂಶ ಕುಸಿತ ಕಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ಕೂಡ ೧೬೬ ಅಂಶ ಇಳಿಕೆಯಾಗಿ, ೧೨,೭೭೨ ಅಂಶಗಳಲ್ಲಿ ಅಂತ್ಯಗೊಂಡಿತು. ದಿನದ ವಹಿವಾಟಿನಲ್ಲಿ ಎಸ್‌ಬಿಐ ಷೇರು ಶೇ.೪.೮೮ರಷ್ಟು ಗರಿಷ್ಠ ನಷ್ಟ ಕಂಡಿತು. ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಭಾರ್ತಿ ಏರ್‌ಟೆಲ್ ಷೇರುಗಳ ಬೆಲೆಯೂ ಇಳಿಕೆ ಆಗಿದೆ. ಪವರ್ ಗ್ರಿಡ್, ಐಟಿಸಿ, ಎನ್‌ಟಿಪಿಸಿ, ಟಾಟಾ ಸ್ಟೀಲ್ ಮತ್ತು ಟೈಟಾನ್ ಷೇರುಗಳ ಮೌಲ್ಯ ಶೇ.೨.೪೩ರವರೆಗೆ ಏರಿಕೆ ಆಗಿದೆ. ಬ್ಯಾಂಕಿAಗ್, ಹಣಕಾಸು, ದೂರಸಂಪರ್ಕ, ರಿಯಲ್ ಎಸ್ಟೇಟ್, ಲೋಹ, ಇಂಧನ ಮತ್ತು ವಾಹನ ವಲಯದ ಸೂಚ್ಯಂಕಗಳು ಶೇ.೨.೭೫ರವರೆಗೆ ಇಳಿಕೆಯಾಗಿವೆ. ರೂಪಾಯಿ ಮೌಲ್ಯ ಒಂದು ಡಾಲರ್‌ಗೆ ೭೪.೨೭ ರೂ. ವಿನಿಮಯಗೊಂಡಿತು.
Courtesyg: Google (photo)