ಸಕ್ಕರೆ ಉತ್ಪಾದನೆ ಹೆಚ್ಚಳ

ಪ್ರಸಕ್ತ ವರ್ಷದಲ್ಲಿ ಡಿ.15ರ ವರೆಗಿನ ಮಾಹಿತಿಯ ಪ್ರಕಾರ ಸಕ್ಕರೆ ಉತ್ಪಾದನೆ ಶೇ. 61ರಷ್ಟು ಹೆಚ್ಚಾಗಿದ್ದು 73.77 ಲಕ್ಷ ಟನ್‌ಗಳಿಗೆ ತಲುಪಿದೆ. ಈ ಬಾರಿ ಕಬ್ಬು ಇಳುವರಿ ಹೆಚ್ಚಾಗಿದೆ. ಇದರ ಜತೆಗೆ ಮಹಾರಾಷ್ಟ್ರದಲ್ಲಿ ಕಬ್ಬು ಅರೆಯುವ ಕಾರ್ಯ ಬೇಗನೆ ಆರಂಭವಾಗಿರುವುದರಿAದ ಉತ್ಪಾದನೆಯಲ್ಲಿ ಏರಿಕೆ ಕಂಡುಬAದಿದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ ತಿಳಿಸಿದೆ. ಹಿಂದಿನ ಮಾರುಕಟ್ಟೆ ವರ್ಷದ ಇದೇ ಅವಧಿಯಲ್ಲಿ 45.81 ಲಕ್ಷ ಟನ್ ಸಕ್ಕರೆ ಉತ್ಪಾದನೆ ಆಗಿತ್ತು. ಸಕ್ಕರೆ ಉತ್ಪಾದನೆಯು ಮಹಾರಾಷ್ಟ್ರದಲ್ಲಿ ಶೇ.7.66 ಲಕ್ಷ ಟನ್‌ಗಳಿಂದ 26.96 ಲಕ್ಷ ಟನ್‌ಗಳಿಗೆ ಹಾಗೂ ಉತ್ತರ ಪ್ರದೇಶದಲ್ಲಿ 21.25 ಲಕ್ಷ ಟನ್‌ಗಳಿಂದ 22.60 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ. ಕರ್ನಾಟಕದಲ್ಲಿ 10.62 ಲಕ್ಷ ಟನ್‌ಗಳಿಂದ 16.65 ಲಕ್ಷ ಟನ್‌ಗಳಿಗೆ ಏರಿಕೆ ಕಂಡಿದೆ. 2020ರ ಅಕ್ಟೋಬರ್ 1ರಿಂದ ಇಲ್ಲಿಯವರೆಗೆ ಪ್ರಸಕ್ತ ಅವಧಿಯಲ್ಲಿ 2.5 ಲಕ್ಷ ಟನ್‌ಗಳಿಂದ 3 ಲಕ್ಷ ಟನ್‌ಗಳಷ್ಟು ಸಕ್ಕರೆ ರಫ್ತು ಮಾಡಿರುವುದಾಗಿ ವ್ಯಾಪಾರಿಗಳ ಮತ್ತು ಮಾರುಕಟ್ಟೆಯ ಮೂಲಗಳು ತಿಳಿಸಿವೆ. ಎಂಎಸ್‌ಪಿ ಹೆಚ್ಚಿಸಿ:- ಸಕ್ಕರೆ ಮೇಲಿನ ಕನಿಷ್ಠ ಮಾರಾಟ ದರ(ಎಂಎಸ್‌ಪಿ) ಹೆಚ್ಚಿಸುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳುವುದನ್ನು ಎದುರು ನೋಡುತ್ತಿರುವುದಾಗಿ ಸಂಘ ಹೇಳಿದೆ. ಎಂಎಸ್‌ಪಿಯನ್ನು ಪ್ರತಿ ಕೆ.ಜಿಗೆ 34.50 ರೂ.ಕ್ಕೆ ಹೆಚ್ಚಿಸುವ ಅಗತ್ಯವಿದೆ ಎಂದು ಹೇಳಿದೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top