ಕೋವಿಡ್‌ಗೆ ಲಸಿಕೆ ಕಂಡುಹಿಡಿಯಲು ಭಾರಿ ಸ್ಪರ್ಧೆ ಏರ್ಪಟ್ಟಿದೆ. ಸಾಮೂಹಿಕವಾಗಿ ಲಸಿಕೆ ನೀಡಬೇಕಿರುವುದರಿಂದ, ಯಶಸ್ವಿ ಲಸಿಕೆ ಕಂಡು ಹಿಡಿಯುವ ಕಂಪನಿ ಹಣ ಕೊಳ್ಳೆ ಹೊಡೆಯಲಿದೆ. ಅಮೃತಬಳ್ಳಿ ಇನ್ನಿತರ ಔಷಧ ಗುಣಗಳುಳ್ಳ ಸಸ್ಯಗಳ ಎಲೆ, ಕಾಂಡ ಮತ್ತಿತರ ಭಾಗಗಳು ಹಾಗೂ ಅವುಗಳಿಂದ ತಯಾರಿಸಿದ ಉತ್ಪನ್ನಗಳನ್ನು ಸೇವಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು ಎಮದು ಆಯುಷ್ ಇಲಾಖೆ ಹೇಳಿದೆ.
ವೈರಾಣುವನ್ನು ಎದುರಿಸಲು ಅರಿಶಿನ, ಜೀರಿಗೆ, ಬೆಳ್ಳುಳ್ಳಿ ಮತ್ತಿತರ ಪದಾರ್ಥಗಳನ್ನು ಹೆಚ್ಚು ಬಳಕೆ ಮಾಡಬೇಕು. ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿ ಇದ್ದಲ್ಲಿ ರೋಗ ಹರಡುವಿಕೆ ಅಥವಾ ವ್ಯಾಧಿಯ ತೀವ್ರತೆಯನ್ನು ಹಿಮ್ಮೆಟ್ಟಿಸಿ ನಿಲ್ಲಬಹುದು. ರೋಗಕ್ಕೆ ಕಾರಣವಾಗುವ ವೈರಾಣುಗಳ ಬಲಕ್ಕಿಂತ ವ್ಯಕ್ತಿಯ ದೇಹದ ರೋಗನಿರೋಧಕ ಶಕ್ತಿ ಬಲಶಾಲಿಯಾದಾಗ, ರೋಗಾಣುಗಳು ರೋಗವುಂಟು ಮಾಡಲು ಆಗುವುದಿಲ್ಲ. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದಂತೆ ತಡೆಗಟ್ಟುವುದು ಜಾಣತನ. ಸಮತೋಲಿತ ಆಹಾರ ಸೇವನೆ, ಉತ್ತಮ ಜೀವನಶೈಲಿ, ಶಿಸ್ತುಬದ್ಧ ದೈನಂದಿನ ಕಾರ್ಯಚಟುವಟಿಕೆಗಳ ಜೊತೆಗೆ ಔಷಧ ಸಸ್ಯಗಳ ಬಳಕೆಯಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಇಲಾಖೆ ತಿಳಿಸಿದೆ.