ಮುಂಬೈ ಷೇರುಪೇಟೆ ವಹಿವಾಟಿನಲ್ಲಿ ಸೋಮವಾರ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. ಅಮೆರಿಕದಲ್ಲಿ ಚುನಾವಣೆಯಲ್ಲಿ ಜೋ ಬೈಡೆನ್ ಆಯ್ಕೆಯಾದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದಿದೆ. ಇದರಿಂದ ಬಿಎಸ್‌ಇ 42,597 ಅಂಶ ತಲುಪಿದ್ದು, ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 704 ಅಂಶಗಳಷ್ಟು ಹೆಚ್ಚಳ ಕಂಡಿದೆ. ರಾಷ್ಟ್ರಯ ಷೇರು ಮಾರುಕಟ್ಟೆ (ಎನ್‌ಎಸ್‌ಇ) ಕೂಡ ಸಾರ್ವಕಾಲಿಕ ಗರಿಷ್ಠ ಮಟ್ಟ 12,461ಕ್ಕೆ ವಹಿವಾಟು ಅಂತ್ಯಗೊಳಿಸಿದೆ. ಇದರಿಂದ ಹೂಡಿಕೆದಾರರ ಸಂಪತ್ತು 2 ಲಕ್ಷ ಕೋಟಿ ರೂಗಳಷ್ಟು ಹೆಚ್ಚಳ ಕಂಡಿದೆ. ಜೋ ಬೈಡೆನ್ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಿದ್ದಾರೆ ಎಂಬ ನಿರೀಕ್ಷೆಯಿದ್ದು, ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದಿದೆ. ಇಂಡಸ್ ಇಂಡ್ ಬ್ಯಾಂಕಿನ ಷೇರು ಮೌಲ್ಯ ಗರಿಷ್ಠ ಶೇ. 4.95 ಹೆಚ್ಚಳ ಹಾಗೂ ಭಾರ್ತಿ ಏರ್‌ಟೆಲ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಪವರ್ ಗ್ರಿಡ್, ಟಾಟಾ ಸ್ಟೀಲ್, ಟೈಟಾನ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಕೂಡ ಏರಿಕೆ ದಾಖಲಿಸಿವೆ. ಆದರೆ, ಐಟಿಸಿ, ಮಾರುತಿ ಮತ್ತು ಬಜಾಜ್ ಫಿನ್‌ಸರ್ವ್ ಕಂಪನಿಯ ಷೇರು ಮೌಲ್ಯದಲ್ಲಿ ಕುಸಿತ ಕಂಡುಬAದಿದೆ. ಅಮೆರಿಕದಲ್ಲಿ ಡೆಮಾಕ್ರಟಿಕ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿದ್ದರಿAದ ಸೂಚ್ಯಂಕಗಳು ಎತ್ತರಕ್ಕೆ ಹೋಗಿವೆ. ದೇಶಿ ಮಾರುಕಟ್ಟೆಗಳಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಷೇರುಗಳು ಏರುಗತಿಯಲ್ಲಿ ಸಾಗಿದವು. ದೇಶಿ ಅರ್ಥ ವ್ಯವಸ್ಥೆಗೆ ಶಕ್ತಿ ತುಂಬಲು ಇನ್ನಷ್ಟು ಕ್ರಮ ಅಗತ್ಯ ಇದೆ. ಸರ್ಕಾರ ಶೀಘ್ರದಲ್ಲೇ ಈ ಸಂಬAಧ ಘೋಷಣೆ ಮಾಡಬಹುದು ಎಂದು ಜಿಯೋಜಿತ್ ಹಣಕಾಸು ಸೇವೆಗಳ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದರು.
Courtesyg: Google (photo)