ಸತತ ಎರಡನೇ ತಿಂಗಳಿನಲ್ಲೂ ದೇಶದ ಸೇವಾ ವಲಯದ ಬೆಳವಣಿಗೆ ಸಕಾರಾತ್ಮಕವಾಗಿದೆ. ಆದರೆ, ಚಟುವಟಿಕೆಗಳ ಸೂಚ್ಯಂಕ ಅಕ್ಟೋಬರ್‌ನಲ್ಲಿ ೫೪.೧ ಇತ್ತು. ನವೆಂಬರ್‌ನಲ್ಲಿ ೫೩.೭ಕ್ಕೆ ಇಳಿಕೆಯಾಗಿದೆ. ಸೂಚ್ಯಂಕ ೫೦ಕ್ಕಿಂತ ಮೇಲ್ಮಟ್ಟದಲ್ಲಿ ಇರುವುದು ಸ್ಥಿರ ಬೆಳವಣಿಗೆಯ ಸೂಚನೆ ಎಂದು ಐಎಚ್‌ಎಸ್ ಮರ್ಕಿಟ್ ತಿಳಿಸಿದೆ.
ಫೆಬ್ರುವರಿ ಬಳಿಕ ಅಕ್ಟೋಬರ್‌ನಲ್ಲಿ ಸೂಚ್ಯಂಕ ೫೦ಕ್ಕಿಂತಲೂ ಹೆಚ್ಚಿದ್ದು, ನವೆಂಬರ್‌ನಲ್ಲೂ ಹೆಚ್ಚಳ ಮುಂದುವರಿದಿದೆ. ಸೆಪ್ಟೆಂಬರ್‌ವರೆಗೆ ನಕಾರಾತ್ಮಕ ಬೆಳವಣಿಗೆ ಕಂಡಿದ್ದ ಸೇವಾ ವಲಯ ಇದೀಗ ಚೇತರಿಸಿಕೊಳ್ಳುತ್ತಿದೆ. ಬೇಡಿಕೆ ಹೆಚ್ಚಳದಿಂದ ವಾಣಿಜ್ಯ ಚಟುವಟಿಕೆಗಳಿಗೆ ವೇಗ ದೊರೆತಿದ್ದು, ಉದ್ಯೋಗ ಸೃಷ್ಟಿಯಲ್ಲೂ ಏರಿಕೆಯಾಗಿದೆ ಎಂದು ಐಎಚ್‌ಎಸ್ ಮರ್ಕಿಟ್‌ನ ಸಹಾಯಕನಿರ್ದೇಶಕ ಪಾಲಿಯಾನ ಡಿ ಲಿಮಾ ತಿಳಿಸಿದ್ದಾರೆ.
ಎಂಟು ತಿಂಗಳು ಉದ್ಯೋಗ ಕಡಿತ ಮಾಡಿದ್ದ ಸೇವಾ ವಲಯದ ಕಂಪನಿಗಳು ನವೆಂಬರ್‌ನಲ್ಲಿ ಹೊಸ ಕೆಲಸಗಾರರನ್ನು ನೇಮಿಸಿಕೊಂಡಿವೆ. ಆದರೆ, ಕೆಲವು ಕಂಪನಿಗಳು ಈಗಾಗಲೇ ಸಾಕಷ್ಟ ಕೆಲಸಗಾರರನ್ನು ಹೊಂದಿರುವುದರಿAದ ಹೊಸ ನೇಮಕ ಮಾಡಿಕೊಂಡಿಲ್ಲ. ಇದರಿಂದ ಉದ್ಯೋಗ ಸೃಷ್ಟಿಯ ಬೆಳವಣಿಗೆ ಕಡಿಮೆ ಇದೆ. ಕೋವಿಡ್‌ನ ನಕಾರಾತ್ಮಕ ಪರಿಣಾಮಗಳಿಂದ ಹೊರಬರಲು ಕಡಿಮೆ ಬಡ್ಡಿ ದರ ಸ್ವಲ್ಪ ಮಟ್ಟಿಗೆ ನೆರವಾಗಿದೆ. ಸೇವಾ ವಲಯದಲ್ಲಿ ಉದ್ಯೋಗ ಸೃಷ್ಟಿಯಿಂದ ದೇಶಿ ಬೇಡಿಕೆ ಹೆಚ್ಚಿದೆ. ಆದರೆ, ಹಣದುಬ್ಬರದಿಂದ ಚೇತರಿಕೆ ಮೇಲೆ ನಕಾರಾತ್ಮಕ ಪರಿಣಾಮದ ಸಾಧ್ಯತೆ ಇದೆ ಎಂದು ಲಿಮಾ ಹೇಳಿದ್ದಾರೆ.
Courtesyg: Google (photo)