ಸ್ಪುಟ್ನಿಕ್-ವಿ ಲಸಿಕೆ ಕೊರೊನಾ ವೈರಸ್ ನಿಯಂತ್ರಣದಲ್ಲಿ ಶೇ.95ಕ್ಕಿಂತ ಹೆಚ್ಚು ಪರಿಣಾಮಕಾರಿ ಎಂದು ರಷ್ಯಾ ಹೇಳಿದೆ. ಮಾಸ್ಕೋದಲ್ಲಿ ನಡೆದ ವರ್ಚ್ಯುವಲ್ ಸಭೆಯಲ್ಲಿ ಮಾತನಾಡಿದ ರಷ್ಯಾ ಡೈರೆಕ್ಟ್ ಇನ್‌ವೆಸ್ಟ್ಮೆಂಟ್ ಫಂಡ್(ಆರ್‌ಡಿಐಎಫ್) ಸಿಇಒ ಕಿರಿಲ್ ಡಿಮಿಟ್ರಿವ್, ಸ್ಪುಟ್ನಿಕ್ ವಿ ಹೆಚ್ಚು ಪರಿಣಾಮಕಾರಿ ಹಾಗೂ ಕಡಿಮೆ ದರದ ಲಸಿಕೆ. ಲಸಿಕೆಯ ಪುಡಿಯನ್ನು 2 ರಿಂದ 8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಶೇಖರಿಸಬಹುದು. ಇದರಿಂದ ಶೇಖರಣೆ, ಸಾಗಣೆ ವೆಚ್ಚ ಕಡಿಮೆ ಆಗಲಿದೆ ಎಂದಿದ್ದಾರೆ. ಸ್ಪುಟ್ನಿಕ್‌ನ ಒಂದು ಡೋಸ್ ದರ ಸುಮಾರು 740 ರೂ. ಮೊದಲ ಡೋಸ್ ಬಳಿಕ ರೋಗನಿರೋಧಕ ಶಕ್ತಿ ಹೆಚ್ಚಿಸಲು ಹೆಚ್ಚುವರಿ ಡೋಸ್ ನೀಡಬೇಕಿದ್ದು, ಎರಡೂ ಸೇರಿ ಸುಮಾರು೧,೪೮೦ ರೂ ವೆಚ್ಚ ಆಗಲಿದೆ. ಪ್ರತಿಸ್ಪರ್ಧಿ ಕಂಪನಿಗಳಿಗೆ ಹೋಲಿಸಿದರೆ, ಈ ದರ ಅರ್ಧದಷ್ಟು ಕಡಿಮೆಎಂದುರಷ್ಯಾ ಹೇಳಿದೆ.
ಲಸಿಕೆಯನ್ನು ಗಮಾಲೆಯ ರಾಷ್ಟ್ರೀಯ ಸಂಶೋಧನಾ ಕೇಂದ್ರ ಹಾಗೂ ಆರ್‌ಡಿಐಎಫ್ ಅಭಿವೃದ್ಧಿಪಡಿಸಿದ್ದು, ರಷ್ಯಾ, ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಪ್ರಯೋಗಾರ್ಥ ಪರೀಕ್ಷೆ ನಡೆಯುತ್ತಿದೆ. ರಷ್ಯಾದಲ್ಲಿ೪೨ ಸಾವಿರ ಸ್ವಯಂಸೇವಕರು ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದು, ಫಲಿತಾಂಶವನ್ನು ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದೆ. ಭಾರತದಲ್ಲಿ ಡಾ.ರೆಡ್ಡೀಸ್ ಲ್ಯಾಬ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಪ್ರಾಯೋಗಿಕ ಪರೀಕ್ಷೆ ಹಾಗೂ ಲಸಿಕೆ ವಿತರಣೆಯ ಜವಾಬ್ದಾರಿ ಹೊತ್ತುಕೊಂಡಿದೆ. ಕೋವಿಡ್ ಲಸಿಕೆಗೆ ಸಂಸಂಧಿಸಿದಂತೆ ಜಗತ್ತಿನ ನಾನಾ ಕಂಪನಿಗಳು ಸ್ಪರ್ಧೆಗಿಳಿದಿವೆ. ಫೈಝರ್ ಶೇ.95ರಷ್ಟು ಹಾಗೂ ಅಮೆರಿಕ ಮೂಲದ ಮೊಡೆರ್ನಾ ಶೇ.94.5ರಷ್ಟು ಪರಿಣಾಮಕಾರಿ ಲಸಿಕೆ ಅಭಿವೃದ್ಧಿಪಡಿಸಿರುವುದಾಗಿ ಈಗಾಗಲೇ ಘೋಷಿಸಿವೆ.
Courtesyg: Google (photo)