ಇ-ಕಾಮರ್ಸ್ ಕಂಪನಿಗಳು ದಸರಾ ವೇಳೆ ಆಯೋಜಿಸಿದ್ದ ಮೇಳದಲ್ಲಿ ಸ್ಮಾರ್ಟ್ಫೋನ್‌ಗಳು ಉತ್ತಮ ಮಾರಾಟ ಕಂಡಿವೆ. ಅಕ್ಟೋಬರ್ 15-20ರ ಮೊದಲ ವಾರದ ಅವಧಿಯಲ್ಲಿ ಪ್ರತಿ ನಿಮಿಷ 1.5 ಕೋಟಿ ರೂ. ಮೌಲ್ಯದ ಸ್ಮಾರ್ಟ್ಫೋನ್‌ಗಳು ಮಾರಾಟವಾಗಿವೆ. ಕಂಪನಿಗಳು ಒಟ್ಟಾರೆ 29,930 ರೂ.ಕೋಟಿ ಮೌಲ್ಯದ ಸರಕುಗಳನ್ನು ಮಾರಾಟ ಮಾಡಿವೆ. ಒಟ್ಟು ಮಾರಾಟದಲ್ಲಿ ಸ್ಮಾರ್ಟ್ಫೋನ್ ಪಾಲು ಶೇ.೪೭ ಎಂದು ಸಂಶೋಧನಾ ಸಂಸ್ಥೆ ರೆಡ್ಸೀರ್ ಮಂಗಳವಾರ ತಿಳಿಸಿದೆ. ಹಿಂದಿನ ವರ್ಷ ಇದೇ ಹಬ್ಬದ ಅವಧಿಯಲ್ಲಿ 19,710 ರೂ.ಕೋಟಿ ಮೌಲ್ಯದ ಸರಕು ಮಾರಾಟವಾಗಿತ್ತು.