ಲಾಕ್ಡೌನ್ ಹಿನ್ನೆಲೆÀಯಲ್ಲಿ ಕುಸಿದಿದ್ದ ಸ್ಮಾರ್ಟ್ಫೋನ್ ಮಾರಾಟ ಈಗ ಹೆಚ್ಚಳಗೊಂಡಿದ್ದು, ಸೆಪ್ಟೆಂಬರ್ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ದೇಶದಲ್ಲಿ ಐದು ಕೋಟಿ ಸ್ಮಾರ್ಟ್ಫೋನ್ಗಳು ಮಾರಾಟ ಆಗಿವೆ. ಈ ಹೆಚ್ಚಳದ ಲಾಭ ಆಗಿರುವುದು ಚೀನಾದ ಕಂಪನಿಗಳಿಗೆ! ಚೀನಾದ ಕಂಪನಿಗಳ ಪಾಲು ಶೇ. ೭೬ರಷ್ಟು ಇದ್ದು, ಶಿವೋಮಿ, ಸ್ಯಾಮ್ಸಂಗ್, ವಿವೊ, ರಿಯಲ್ಮಿ ಹಾಗೂ ಒಪ್ಪೊ ಮುಂಚೂಣಿಯಲ್ಲಿವೆ. ಈ ಕಂಪನಿಗಳ ಉತ್ಪನ್ನಗಳ ಮಾರಾಟ ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.೮ ರಷ್ಟು ಹೆಚ್ಚಳಗೊಂಡಿದೆ. ತ್ರೈಮಾಸಿಕ ಒಂದರಲ್ಲಿ ಐದು ಕೋಟಿ ಸ್ಮಾರ್ಟ್ಫೋನ್ಗಳು ಮಾರಾಟ ಆಗಿರುವುದು ಭಾರತದ ಮಟ್ಟಿಗೆ ಒಂದು ದಾಖಲೆ ಎಂದು ಮಾರುಕಟ್ಟೆ ವಿಶ್ಲೇಷಣೆ ಕಂಪನಿ “ಕ್ಯಾನಲಿಸ್’ ಹೇಳಿದೆ. ಹಿಂದಿನ ವರ್ಷ ದೇಶದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳ ಪಾಲು ಶೇ. ೭೪ ಇತ್ತು. ಈಗ ಶೇ. ೨ ರಷ್ಟು ಹೆಚ್ಚಳ ಕಂಡಿದೆ. ಆದರೆ, ಜೂನ್ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇ. ೮೦ ಇತ್ತು. ಭಾರತ ಮತ್ತು ಚೀನಾ ನಡುವಿನ ತಿಕ್ಕಾಟದ ಪರಿಣಾಮ ಗ್ರಾಹಕರ ಖರೀದಿ ಪ್ರವೃತ್ತಿ ಮೇಲೆ ಗಮನಾರ್ಹ ಪರಿಣಾಮ ಬೀರಿಲ್ಲ್ಲ’ ಎಂದು ಕ್ಯಾನಲಿಸ್ನ ವಿಶ್ಲೇಷಕ ವರುಣ್ ಕಣ್ಣನ್ ಹೇಳಿದ್ದಾರೆ. ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚೀನಾದ ಸ್ಮಾರ್ಟ್ಫೋನ್ ಕಂಪನಿಗಳು ಮಾರುಕಟ್ಟೆ ವೆಚ್ಚವನ್ನು ತಗ್ಗಿಸಿವೆ. ಭಾರತದ ಆರ್ಥಿಕ ಭವಿಷ್ಯಕ್ಕೆ ತಮ್ಮ ಪಾಲು ಕೂಡ ಇರಲಿದೆ ಎಂಬ ಚಿತ್ರಣವನ್ನು ಕಟ್ಟಿಕೊಡಲು ಪ್ರಯತ್ನಿಸುತ್ತಿವೆ ಎಂದು ಕಣ್ಣನ್ ಅಭಿಪ್ರಾಯ ಪಟ್ಟಿದ್ದಾರೆ. ಲಾಕ್ಡೌನ್ ನಿಯಮಗಳನ್ನು ಸಡಿಲಗೊಳಿಸಿರುವುದರಿಂದ ಬೆಳವಣಿಗೆಗೆ ಸೂಕ್ತವಾದ ವಾತಾವರಣ ಸೃಷ್ಟಿಯಾಗಿದೆ. ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ನ ಹಬ್ಬದ ಮೇಳಗಳನ್ನು ಗಮನಿಸಿದರೆ, ಗುಣಮಟ್ಟದ ಸ್ಮಾರ್ಟ್ಫೋನ್ಗಳಿಗೆ ಭಾರತದಲ್ಲಿ ಬೇಡಿಕೆ ಕಡಿಮೆಯಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಕ್ಯಾನಲಿಸ್ನ ಅದ್ವೈತ್ ಮರ್ಡಿಕರ್ ಹೇಳಿದ್ದಾರೆ.
Courtesyg: Google (photo)