ನವರಾತ್ರಿ ಆರಂಭವಾಗುತ್ತಿದ್ದಂತೆ ಹಬ್ಬಗಳ ಸಾಲು-ಸಾಲಾಗಿ ಬರುತ್ತವೆ. ಈ ಸಮಯ ಹೂವಿಗೆ ಬೇಡಿಕೆ ಅತೀ ಹೆಚ್ಚು. ಹೂವಿನ ಬೆಲೆ ಏರಿಕೆಯಾಗಿದ್ದು, ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಕೋವಿಡ್‌ನಿಂದಾ ಕಂಗಾಲಾಗಿದ್ದ ಬೆಳೆಗಾರರು ಸೂಕ್ತ ಬೆಲೆಗಾಗಿ ಕಾಯುತ್ತಿದ್ದರು. ಲಾಕ್‌ಡೌನ್ ಹಿಂತೆಗೆದು ಕೊಂಡ ನಂತರ ಸ್ವಲ್ಪ ನೆಮ್ಮದಿಯಿಂದ ವ್ಯಾಪರಕ್ಕೆ ಮತ್ತೆ ಮರಳಿದ್ದರು. ಹಬ್ಬದ ಸಮಯದಲ್ಲಿ ಹೂವಿಗೆ ಒಳ್ಳೆಯ ಬೆಲೆ ಬಂದಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ೧ ಕೆ.ಜಿ. ಸೇವಂತಿಗೆ ₹ 80ರಿಂದ ₹ 100ಕ್ಕೆ ಮಾರಾಟವಾಗುತ್ತಿದೆ. ಮೊದಲು ₹ 40ಕ್ಕೆ ಮಾರಾಟವಾಗುತ್ತಿತ್ತು. ಆ ವೇಳೆ ಬಂಡವಾಳವೂ ಕೈಗೆಸಿಗುತ್ತಿರಲಿಲ್ಲ. ಹಾಗಾಗಿ, ಸಾಕಷ್ಟು ನಷ್ಟ ಅನುಭವಿಸಬೇಕಾಗಿತ್ತು. ಈಗ ಸ್ವಲ್ಪ ಚೇತರಿಸಿಕೊಳ್ಳುವಂತಾಗಿದೆ. ಬೆಲೆ ಹೆಚ್ಚಿದಂತೆ ರೈತರಿಗೆ ಸಂತಷದ ತಂದಿದೆ. ರೈತರು ಹಾಕಿದ ಬಂಡವಾಳ ಕೈಗೆ ಸಿಗುತ್ತದೆ ಎನ್ನುತ್ತಾರೆ ರೈತರು.