ಹೊಸ ಅಡಕೆಗೆ ದಾಖಲೆ ಬೆಲೆ ಲಭ್ಯವಾಗಿದ್ದು, ಕ್ವಿಂಟಾಲ್‌ಗೆ 35,200 ರೂ.ಸಿಕ್ಕಿದೆ. ಆದರೆ, ಹಳೆ ಅಡಕೆ ಬೆಲೆಯಲ್ಲಿ ಹೆಚ್ಚೇನೂ ಏರುಪೇರು ಕಾಣದೆ ಸ್ಥಿರವಾಗಿದೆ. ಈ ವರ್ಷದ ಹಂಗಾಮಿನ ಹೊಸ ಅಡಕೆಗೆ ಲಭಿಸಿರುವ ಗರಿಷ್ಠ ಧಾರಣೆ ಇದಾಗಿದ್ದು, ಕಳೆದ ಐದು ವರ್ಷಗಳಲ್ಲಿ ಸಿಕ್ಕ ಗರಿಷ್ಠ ಬೆಲೆ ಇದು. ಕಳೆದ ವಾರದಿಂದ ಹಳೆಯ ಅಡಕೆ, ಡಬಲ್ ಚೋಲ್ ಅಡಕೆ ಧಾರಣೆಯಲ್ಲೂ ಗಣನೀಯ ಏರಿಕೆಯಾಗಿದೆ. ಹೊಸ ಅಡಕೆಗೆ ಪುತ್ತೂರು, ಬೆಳ್ತಂಗಡಿ ಮತ್ತು ಕಾರ್ಕಳ ಎಪಿಎಂಸಿಯುಲ್ಲಿ 35,000 ರೂ., ಸುಳ್ಯ, ಬಂಟ್ವಾಳ ಮಾರುಕಟ್ಟೆಯಲ್ಲಿ 34,500 ರೂ.ಗೆ ಖರೀದಿಯಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಹೊಸ ಅಡಕೆ ಬೆಲೆ ಕೆಜಿಗೆ 250-270 ರೂ.ಇತ್ತು. 300ರ ಗಡಿ ದಾಟಿದ್ದು ಕಡಿಮೆ.
ಕಳೆದ ವಾರದಿಂದ ಹಳೆ ಅಡಕೆ ಧಾರಣೆ ಸ್ಥಿರವಾಗಿದೆ. ಜ.೧ರಂದು ಗರಿಷ್ಠ 36,500 ರೂ.ಇತ್ತು. ಈಗಲೂ ಅದೇ ದರ ಮುಂದುವರಿದಿದೆ.ಖಾಸಗಿ ವಲಯವಲ್ಲದೆ, ಕ್ಯಾಂಪ್ಕೊ ಕೂಡ ಬೆಲೆ ಏರಿಸಿದೆ. ಕ್ಯಾಂಪ್ಕೊ ಮಾರುಕಟ್ಟೆಯಲ್ಲಿ ಹೊಸ ಅಡಕೆ 350 ರೂ. ಹಾಗೂ ಡಬಲ್ ಚೋಲ್ 410 ರೂ.ಗೆ ಖರೀದಿಯಾಗಿದೆ. ಉತ್ತರ ಭಾರತದಲ್ಲಿ ಅಡಕೆಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಪೂರೈಕೆ ಸಾಕಷ್ಟಿಲ್ಲ.
Courtesyg: Google (photo)