ಹೊಸ ವರ್ಷದಲ್ಲಿ ಕೋವಿಡ್ ಲಸಿಕೆ ಸಿಗುವ ಸಾಧ್ಯತೆ ಇದೆ ಎಂದು ಭಾರತೀಯ ಔಷಧ ಮಹಾ ನಿಯಂತ್ರಕ ವಿ.ಜಿ. ಸೊಮಾನಿ ಸುಳಿವು ನೀಡಿದ್ದಾರೆ.
ತಮ್ಮ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಬೇಕೆಂದು ಸೀರಂ ಇನ್ಸ್ಟಿಟ್ಯೂಟ್, ಭಾರತ್ ಬಯೋಟೆಕ್ ಹಾಗೂ ಫೀಜರ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಈ ಬಗ್ಗೆ ಪ್ರಾಯಶಃ ಇಂದು(ಶುಕ್ರವಾರ) ಅಂತಿಮ ತೀರ್ಮಾನ ಬರಲಿದೆ.
ಜ.೨ರಂದು ಕೋವಿಡ್ ಲಸಿಕೆ ಅಣಕು ಕಾರ್ಯಾಚರಣೆ ನಡೆಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಮುಂದಿನ ತಿಂಗಳುಗಳಲ್ಲಿ ೩೦ ಕೋಟಿ ಜನರಿಗೆ ಲಸಿಕೆ ಹಾಕÀಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇದರ ಜಾರಿಯ ಸಿದ್ಧತೆ ಪರಿಶೀಲನೆಗೆ ಗುರುವಾರ ನಡೆದ ಸಭೆಯಲ್ಲಿ ರಾಜ್ಯಗಳ ರಾಜಧಾನಿಯಲ್ಲಿ ಅಣಕು ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಯಿತು.
ಪ್ರತಿ ರಾಜ್ಯ ಮೂರು ಕೇಂದ್ರಗಳಲ್ಲಿ ಅಣಕು ಕ್ಯಾಂಪ್ ನಡೆಸಬೇಕು. ಪ್ರತಿ ಕೇಂದ್ರದಲ್ಲಿ ೨೫ ಕಾರ್ಯಕರ್ತರಿಗೆ ಡೋಸ್ ನೀಡಿ, ಕಾರ್ಯಕರ್ತರ ದತ್ತಾಂಶಗಳನ್ನು ಕೋವಿನ್ ಆ್ಯಪ್ನಲ್ಲಿ ಅಳವಡಿಸ ಬೇಕು. ಹೆಚ್ಚು ಅಪಾಯಕ್ಕೆ ಒಳಗಾಗಬಹುದಾದ ೨೭ ಕೋಟಿ ನಾಗರಿಕರಿಗೆ ಲಸಿಕೆ ನೀಡಲು ಸಚಿವಾಲಯ ಉದ್ದೇಶಿಸಿದೆ.