ಹೊಸ ವರ್ಷದಲ್ಲಿ ಚಿನ್ನ ದುಬಾರಿ

ಆರ್ಥಿಕ ಚೇತರಿಕೆಗೆ ಕೈಗೊಂಡ ಕ್ರಮಗಳು ಹಾಗೂ ಅಮೆರಿಕದ ಡಾಲರ್ ದುರ್ಬಲವಾಗಿರುವುದರಿಂದ, 2021ರಲ್ಲಿ ಚಿನ್ನದ ದರ 10 ಗ್ರಾಂಗೆ 63 ಸಾವಿರ ರೂ. ಹೆಚ್ಚುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. 2020ರಲ್ಲಿ ಕೋವಿಡ್‌ನಿಂದ ಉಂಟಾದ ಆರ್ಥಿಕ ಮತ್ತು ಸಾಮಾಜಿಕ ಅನಿಶ್ಚಿತ ಸ್ಥಿತಿಯಿಂದ ಚಿನ್ನದ ಮೇಲಿನ ಹೂಡಿಕೆ ಹೆಚ್ಚಿತು. ಇದರಿಂದ ಚಿನ್ನದ ದರ 10 ಗ್ರಾಂಗೆ 56,191 ರೂ. ತಲುಪಿತು.

ಜಾಗತಿಕ ಹಣಕಾಸು ನೀತಿಗಳಿಂದ ಬಡ್ಡಿ ದರ ಕನಿಷ್ಠ ಮಟ್ಟಕ್ಕೆ ಇಳಿಯಿತು. ಇದರಿಂದ ನಗದು ಲಭ್ಯತೆ ಹೆಚ್ಚಾಗಿ, ಪ್ರಮುಖ ಕರೆನ್ಸಿಗಳ ಎದುರು ಚಿನ್ನದ ದರ ಏರಿಕೆಗೆ ಕಾರಣವಾಯಿತು. ಭಾರಿ ಪ್ರಮಾಣದ ಉತ್ತೇಜನ ಕೊಡುಗೆಗಳಿಂದಾಗಿ 2021ರಲ್ಲಿ ಚಿನ್ನ ಹೂಡಿಕೆಯನ್ನು ಆಕರ್ಷಿಸಲಿದೆ ಎಂದು ಕಾಮ್‌ಟ್ರೆಂಡ್ಸ್ ರಿಸ್ಕ್ ಮ್ಯಾನೇಜ್‌ಮೆಂಟ್ ಸರ್ವೀಸಸ್‌ನ ಸಿಇಒ ಗುಣಶೇಖರ್ ತ್ಯಾಗರಾಜನ್ ಹೇಳಿದ್ದಾರೆ. ಅಮೆರಿಕದಲ್ಲಿನ ರಾಜಕೀಯ ಬೆಳವಣಿಗೆಗಳು ಕೂಡ ಚಿನ್ನದ ದರ ಏರಿಕೆಗೆ ಕಾರಣವಾಗಬಹುದು. ಜೋ ಬೈಡೆನ್ ಆಡಳಿತ ಸುಧಾರಣೆ ಕ್ರಮ ಜಾರಿಗೊಳಿಸಲು ಕಷ್ಟವಾಗಬಹುದು. ೨೦೨೧ರಲ್ಲಿ ಚಿನ್ನದ ದರ ಏರುಮುಖವಾಗಿಯೇ ಇರಲಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ  ತಪನ್ ಪಟೇಲ್ ಹೇಳಿದ್ದಾರೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top