ಹೊಸ ವೈರಸ್: ಆರು ಮಂದಿಯಲ್ಲಿ ಪತ್ತೆ

ಬ್ರಿಟನ್‌ನಿಂದ ಹಿಂದಿರುಗಿದ್ದ ಆರು ಜನರಲ್ಲಿ ಹೊಸ ಸ್ವರೂಪದ ಕೊರೊನಾ ವೈರಸ್ ದೃಢಪಟ್ಟಿದೆ. ರೂಪಾಂತರಗೊAಡ ಕೊರೊನಾ ವೈರಸ್‌ನ ಪತ್ತೆಗೆ ಸ್ಥಾಪನೆಯಾದ 10 ಪ್ರಯೋಗಾಲಯಗಳಲ್ಲಿ ನಿಮ್ಹಾನ್ಸ್ನ ಪ್ರಯೋಗಾಲಯದಲ್ಲಿ ಮೂವರು, ಹೈದರಾಬಾದ್‌ನ ಪ್ರಯೋಗಾಲಯದಲ್ಲಿ ಇಬ್ಬರು ಮತ್ತು ಪುಣೆಯ ಪ್ರಯೋಗಾಲಯದಲ್ಲಿ ಒಬ್ಬರಲ್ಲಿ ರೂಪಾಂತರ ಕೊರೊನಾ ವೈರಸ್ ದೃಢಪಟ್ಟಿದೆ. ಆರು ಮಂದಿಯನ್ನೂ ನಿಗದಿತ ಆಸ್ಪತ್ರೆಗಳ ಐಸೊಲೇಷನ್ ಘಟಕದಲ್ಲಿ ಇರಿಸಲಾಗಿದೆ. ಡಿಸೆಂಬರ್ 9ರಿಂದ 22ರ  ಅವಧಿಯಲ್ಲಿ ಬ್ರಿಟನ್‌ನಿಂದ ವಾಪಸಾದವರಿಗೆ ರೂಪಾಂತರ ವೈರಸ್ ಪತ್ತೆ ಪರೀಕ್ಷೆ ಕಡ್ಡಾಯಗೊಳಿಸಲು ಕೇಂದ್ರ ಆರೋಗ್ಯ ಸಚಿವಾಲಯ ನಿರ್ಧರಿಸಿದೆ.

ಬ್ರಿಟನ್‌ನಿಂದ ಬಂದವರನ್ನು ಪತ್ತೆ ಮಾಡಲು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ. ಆಗಮಿಸಿದವರು ಮತ್ತು ಅವರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡುವ ಜವಾಬ್ದಾರಿಯನ್ನು ಜಿಲ್ಲಾಡಳಿತಗಳಿಗೆ ವಹಿಸಲಾಗಿದೆ. ಈ ಅವಧಿಯಲ್ಲಿ ಹಿಂತಿರುಗಿದವರಲ್ಲಿ ಕೋವಿಡ್ ಲಕ್ಷಣ ಇದ್ದರೂ, ಇಲ್ಲದೆಯಿದ್ದರೂ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ನ.25ರಿಂದ ಡಿ.23ರವರೆಗೆ ಬ್ರಿಟನ್‌ನಿಂದ ದೇಶಕ್ಕೆ 33,000ಕ್ಕೂ ಅಧಿಕ ಮಂದಿ ಬಂದಿದ್ದಾರೆ. ಇವರಲ್ಲಿ ಕೆಲವೇ ಸಾವಿರ ಜನರನ್ನಷ್ಟೇ ಪತ್ತೆಮಾಡಿ, ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದು, 114 ಜನರಲ್ಲಿ ಕೋವಿಡ್ ದೃಢಪಟ್ಟಿದೆ. ಎಲ್ಲರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ಇವರಲ್ಲಿ 6 ಜನರಿಗೆ ರೂಪಾಂತರ ಕೊರೊನಾ ವೈರಸ್ ತಗುಲಿರುವುದು ಪತ್ತೆಯಾಗಿದೆ ಎಂದು ಸಚಿವಾಲಯ ಹೇಳಿದೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top