ರೂಪಾಂತರಗೊಂಡ ಕೊರೊನಾ ವೈರಸ್ ಆಂಧ್ರಪ್ರದೇಶದಲ್ಲಿ ಪತ್ತೆಯಾಗಿದ್ದು, ವೈರಸ್‌ಗೆ ಎನ್440ಕೆ ಎಂದು ಹೆಸರಿಸಲಾಗಿದೆ. ವ್ಯಕ್ತಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿಯಿಂದ ಉತ್ಪತ್ತಿಯಾಗುವ ಪ್ರತಿಕಾಯಗಳಿಗೂ ಈ ವೈರಸ್‌ಗಳು ಬಗ್ಗುವುದಿಲ್ಲ. ಆಂಧ್ರಪ್ರದೇಶದಲ್ಲಿ ವೈರಸ್ ತೀವ್ರವಾಗಿ ಹರಡುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಉತ್ತರಾಖಂಡ, ಹರಿಯಾಣ, ಗುಜರಾತ್ ಹಾಗೂ ದಿಲ್ಲಿಯಲ್ಲೂ ಎನ್೪೪೦ಕೆ ಕಂಡು ಬಂದಿದೆ. ಕೋವಿಡ್ ಪುನಃ ಕಾಣಿಸಿಕೊಂಡ ವ್ಯಕ್ತಿಯೊಬ್ಬರು ನೋಯ್ಡಾದ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ವೈರಸ್‌ನ ವಂಶವಾಹಿ(ಜಿನೋಮ್)ಯನ್ನು ವಿಶ್ಲೇಷಿಸಿ ದಾಗ, ಎನ್೪೪೦ಕೆ ವಿಧದ ವೈರಸ್‌ನಿಂದ ಅವರಲ್ಲಿ ಪುನಃ ಸೋಂಕು ಉಂಟಾಗಿರುವುದು ದೃಢಪಟ್ಟಿದೆ.
ಆಂಧ್ರಪ್ರದೇಶದಲ್ಲಿನ ಕಂಡುಬಂದ ವೈರಸ್‌ನ್ನು ಪ್ರತ್ಯೇಕಿಸಿ, ವಿಶ್ಲೇಷಿಸಿದಾಗ ಮಾತ್ರ ಅದರ ರಚನೆ, ಪ್ರಸರಣದ ವೇಗ ಮತ್ತಿತರ ಅಂಶಗಳು ಗೊತ್ತಾಗಲಿವೆ ಎಂದು ಸಿಎಸ್‌ಐಆರ್‌ನ ಇನ್‌ಸ್ಟಿಟ್ಯೂಟ್ ಫಾರ್ ಜಿನೋಮಿಕ್ಸ್ ಆ್ಯಂಡ್ ಇಂಟಿಗ್ರೇಟಿವ್ ಬಯಾಲಜಿಯ ವಿಜ್ಞಾನಿ ವಿನೋದ್ ಹೇಳಿದ್ದಾರೆ. ಹೊಸ ವೈರಸ್ ಏಷ್ಯಾದ ಇತರ ಪ್ರದೇಶಗಳಲ್ಲಿ ಜುಲೈ–ಆಗಸ್ಟ್ ಅವಧಿಯಲ್ಲಿಯೇ ಕಂಡು ಬಂದಿತ್ತು. ಅನೇಕ ಲಸಿಕೆಗಳು ಈಗ ಬಳಕೆಗೆ ಸಿದ್ಧವಾಗಿವೆ. ಹೊಸ ವೈರಸ್ ಮೇಲೆ ಲಸಿಕೆಗಳು ಯಾವ ಪರಿಣಾಮ ಉಂಟು ಮಾಡಲಿವೆ ಎಂಬುದನ್ನು ತಿಳಿಯಲು ಇನ್ನಷ್ಟು ಸಂಶೋಧನೆ, ವಿಶ್ಲೇಷಣೆ ಅಗತ್ಯ ಎಂದು ವಿನೋದ್ ಹೇಳುತ್ತಾರೆ.
Courtesyg: Google (photo)