ಈರುಳ್ಳಿ ಬೆಲೆ ಗಗನ ಮುಟ್ಟಿದೆ. ಈ ಹಿನ್ನೆಲೆಯಲ್ಲಿ ಕೊರತೆಯನ್ನು ನೀಗಿಸಲು ಹಾಗೂ ಬೆಲೆ ನಿಯಂತ್ರಣಕ್ಕೆ 25 ಸಾವಿರ ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ಕೇಂದ್ರ ನಿರ್ಧರಿಸಿದೆ. ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ ಕೂಡ ಈರುಳ್ಳಿ ಆಮದಿಗೆ ಒಪ್ಪಿಗೆ ನೀಡಿದೆ. ಜತೆಗೆ, ಆಲೂಗಡ್ಡೆಯನ್ನೂ ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಆಲೂಗಡ್ಡೆ ಮೇಲಿನ ಕಸ್ಟಂಸ್ ಸುಂಕವನ್ನು ಜನವರಿವರೆಗೆ ಅನ್ವಯ ಆಗುವಂತೆ ಶೇ. 10ಕ್ಕೆ ಇಳಿಕೆ ಮಾಡಲಾಗಿದೆ. 30 ಸಾವಿರ ಟನ್‌ಗಳಷ್ಟು ಆಲೂಗಡ್ಡೆ ಭೂತಾನ್‌ನಿಂದ ಆಗಮಿಸಲಿದೆ. ದೇಶದಲ್ಲಿ ಈರುಳ್ಳಿ ಚಿಲ್ಲರೆ ಮಾರಾಟ ಬೆಲೆ ಕೆ.ಜಿ.ಗೆ 65 ರೂ. ಹಾಗೂ ಆಲೂಗಡ್ಡೆ ದರ ೪೩ ರೂ. ಆಸುಪಾಸಿನಲ್ಲಿ ಇದೆ.
Courtesyg: Google (photo)