ಹ್ಯೂಸ್ಟನ್: ಭಾರತೀಯ ಮೂಲಕ ಶಾಲಾ ಬಾಲಕಿ ಅನಿಕಾ ಚೆಬ್ರೊಲು, ೧೮.೭೫ ಲಕ್ಷ ರೂ. ಮೊತ್ತದ ‘೩ಎಂ ಯುವ ವಿಜ್ಞಾನಿ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ೩ಎಂ ಯುವವಿಜ್ಞಾನಿ ಸವಾಲನ್ನು ಅಮೆರಿಕದ ಮಾಧ್ಯಮಿಕ ಶಾಲಾ ವಿಜ್ಞಾನದ ಪ್ರಮುಖ ಸ್ಪರ್ಧೆ ಎಂದು ಪರಿಗಣಿಸಲಾಗಿದೆ. ಅನಿಕಾ ಟೆಕ್ಸಾಸ್‌ನ ಫ್ರಿಸ್ಕೊದಲ್ಲಿ ಎಂಟನೇ ತರಗತಿ ಓದುತ್ತಿದ್ದಾರೆ. ಕಳೆದ ವರ್ಷ ತೀವ್ರತರವಾದ ಇನ್‌ಫ್ಲುಯೆನ್ಜಾ ಸೋಂಕಿಗೆ ತುತ್ತಾಗಿದ್ದ ಅನಿಕಾ, ಔಷಧ ಕಂಡುಹಿಡಿಯಲು ನಿರ್ಧರಿಸಿದ್ದರು. ಅಷ್ಟರಲ್ಲಿ ಕೋವಿಡ್ ಅಡಿಯಿಟ್ಟಿತು. ‘ಔಷಧ ಅಭಿವೃದ್ಧಿ ಕೆಲಸಕ್ಕೆ ೩ಎಂ ವಿಜ್ಞಾನಿಗಳ ಸಹಕಾರ ದೊರೆಯಬಹುದು ಎಂಬ ಉದ್ದೇಶದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದೆ. ಔಷಧದ ಇನ್–ವಿಟ್ರೊ ಮತ್ತು ಇನ್–ವಿವೊ ಪರೀಕ್ಷೆ ನಡೆಸಲು ಉದ್ದೇಶಿಸಿದ್ದೇನೆ’ ಎಂದು ಹೇಳಿದ್ದಾರೆ. ಕೋವಿಡ್‌ಗೆ ಔಷಧ ಕಂಡುಹಿಡಿಯಲು ಅನಿಕಾ, ಇನ್‌ಸಿಲಿಕಾ ವಿಧಾನ ಬಳಸಿದ್ದಾರೆ.