ಜಗತ್ತಿನ ನಾಲ್ಕನೆಯ: ನಾವಿನ್ಯತಾ ಕೇಂದ್ರ ಬೆಂಗಳೂರಿನಲ್ಲಿ

ಬೆಂಗಳೂರಿನಲಿ ್ಲನಾವಿನ್ಯತಾ ಕೇಂದ್ರ ಸ್ಥಾಪನೆಗೆ ಮುಂಬರುವಾ ಐದು ವರ್ಷಗಳ ₹ ೧,೩೯೦ ಕೋಟಿ ಖರ್ಚಿನಲ್ಲಿ ನಿರ್ಮಾಣವಾಗಲಿದೆ ಎಂದು ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದ ಸಿಮನ್ಸ್ ಹೆಲ್ತಿನರ್ಸ್ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಪೀಟರ್ ಶಾರ್ಟ್ ತಿಳಿಸಿದರು.  ಇದರಿಂದ ಭಾರತದ ಹಲವಾರು ಮಾರುಕಟ್ಟೆಯು ಕಂಪನಿಯ ಬೆಳವಣಿಗೆಗೆ ಪ್ರಮುಖ ಪಾತ್ರ‍್ರ ವಹಿಸುತ್ತಿದೆ. ಹೀಗಾಗಿ ೨೦೨೫ರ ಕಾರ್ಯತಂತ್ರದ ಒಂದು ಭಾಗವಾಗಿ ಈ ಹೂಡಿಕೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ಹಳೆಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಹಾಗೂ ಅಲ್ಟ್ರಾ ಮಾಡರ್ನ್ಸ್ ಮೆಡಿಕಲ್ ಇಮೇಜಿಂಗ್ ಫ್ಯಾಕ್ಟರಿಯ ಪಕ್ಕದಲ್ಲೇ ಈ ನಾವಿನ್ಯತಾ ಕೇಂದ್ರ ನಿರ್ಮಾಣವಾಗಲಿದೆ. ಅಮೆರಿಕ, ಜರ್ಮನಿ ಮತ್ತು ಚೀನಾದ ನಂತರ ನಾಲ್ಕನೆಯ ನಾವಿನ್ಯತಾ ಕೇಂದ್ರ ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ. ಇದರಲ್ಲಿ ಡೇಟಾ ಅನಲಿಟಿಕ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಆಗ್ಮೆಂಟೆಡ್ & ವರ್ಚುವಲ್ ರಿಯಾಲಿಟಿ, ಸೈಬರ್ ಸೆಕ್ಯುರಿಟಿ ಕೇಂದ್ರಗಳು ಇರಲಿವೆ ಎಂದು ಕಂಪನಿ ತಿಳಿಸಿದೆ.

Journalist,Translator,avid bibliophile

Leave a Reply

Your email address will not be published. Required fields are marked *

Back To Top