ಈರುಳ್ಳಿ ದರ ದಿಢೀರ್ ಏರಿಕೆಯಾಗಿದ್ದು, ಉತ್ತಮ ಗುಣಮಟ್ಟದ ಈರುಳ್ಳಿ ಪ್ರತಿ ಕೆ.ಜಿ.ಗೆ ₹೧೦೦, ಸೋಮವಾರದ ₹೬೦ರಿಂದ ₹೭೦ರಷ್ಟಿತ್ತು. ಒಂದೇ ದಿನಕ್ಕೆ ದಿಢೀರ್ ದರ ಏರಿಕೆ ಕಂಡಿದ್ದು, ಪ್ರತಿ ಕೆ.ಜಿ.ಗೆ ಕನಿಷ್ಠ ₹೮೦ರಿಂದ ಗರಿಷ್ಠ ₹೧೦೦ಕ್ಕೆ ತಲುಪಿದೆ. ಹಾಪ್ಕಾಮ್ನಲ್ಲಿ ಈರುಳ್ಳಿ ದರ ಪ್ರತಿ ಕೆ.ಜಿ.ಗೆ ₹೮೫ ಹಾಗೂ ಚಿಲ್ಲರೆ ದರ ₹೧೨೦ರವರೆಗೆ ದಾಟಿದೆ. ಈರುಳ್ಳಿ ಉತ್ಪಾದನೆಯಾಗುತ್ತಿದ್ದಾ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಭಾರಿ ಮಳೆಯಿಂದ ಈರುಳ್ಳಿ ಬೆಳೆಗಳು ಹಾನಿಗೊಂಡಿವೆ. ಉತ್ತಮ ಗುಣಮಟ್ಟದ ಈರುಳ್ಳಿಗೆ ಬೇಡಿಕೆ ಸೃಷ್ಟಿಯಾಗಿರುವುದರಿಂದ ಬೆಲೆ ದಿಢೀರ್ ಏರಿದೆ. ಮಹಾರಾಷ್ಟ್ರದಿಂದ ಈಗ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ರಾಜ್ಯದ ಕೆಲ ಭಾಗಗಳಾದ ಚಿತ್ರದುರ್ಗ, ದಾವಣಗೆರೆ, ಗದಗ, ಹುಬ್ಬಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಮಾತ್ರ ಈರುಳ್ಳಿ ಬರುತ್ತಿದೆ. ಮಳೆಯಿಂದ ಒಟ್ಟು ಶೇ ೭೦ರಷ್ಟು ಪ್ರಮಾಣ ಹಾನಿಯಾಗಿವೆ. ರೈತರಿಗೂ ಈ ಸ್ಥಿತಿ ಕಬ್ಬಿಣದ ಕಡಲೆಯಂತಾಗಿದೆ. ಯಶವಂತಪುರ ಎಪಿಎಂಸಿಗೆ ಮಂಗಳವಾರ ಒಟ್ಟು ೪೬,೩೦೪ ಬ್ಯಾಗ್ ಹಾಗೂ ದಾಸನಪುರ ಎಪಿಎಂಸಿ ಉಪ ಪ್ರಾಂಗಣಕ್ಕೆ ೯೦೧ ಬ್ಯಾಗ್ ಈರುಳ್ಳಿ ಸಂಗ್ರಹವಾಗಿದೆ.