ಕೋವಿಡ್ ಇದ್ದರೂ ಉದ್ಯೋಗ ಸೃಷ್ಟಿ

ಕೋವಿಡ್ ನಿಂದ ದೇಶದ ಎಲ್ಲೆಡೆ ನಿರುದ್ಯೋಗ ಹೆಚ್ಚಾಗಿದೆ. ಆದರೆ, ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟವು ವೇಗವಾಗಿ ನಿರುದ್ಯೋಗದ ಹಿಡಿತದಿಂದ  ಹೊರಬರುತ್ತಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ(ಸಿಎಂಐಇ) ತಿಳಿಸಿದೆ. ದೇಶದಲ್ಲಿ ಅನ್‌ಲಾಕ್ ಪ್ರಕ್ರಿಯೆ ಆರಂಭವಾದ ನಂತರ ಆಗಸ್ಟ್ನಲ್ಲಿ ಕರ್ನಾಟಕದಲ್ಲಿ ನಿರುದ್ಯೋಗ ಪ್ರಮಾಣವು ಶೇ.೦.೫ಕ್ಕೆ ಇಳಿಕೆಯಾಗಿತ್ತು. ಸೆಪ್ಟೆಂಬರ್‌ನಲ್ಲಿ ಅದು ಶೇ. ೨.೪ರಷ್ಟಿತ್ತು. ಆದರೆ, ಮಹಾರಾಷ್ಟ್ರದಲ್ಲಿ ನಿರುದ್ಯೋಗ ಪ್ರಮಾಣ ಶೇ. ೪.೫೫, ಗುಜರಾತ್‌ನಲ್ಲಿ ಶೇ. ೩.೪ ಹಾಗೂ ತಮಿಳುನಾಡಿನಲ್ಲಿ ಶೇ. ೫ ಇತ್ತು. ರಾಷ್ಟç ಮಟ್ಟದಲ್ಲಿನ ನಿರುದ್ಯೋಗ ಪ್ರಮಾಣ(ಶೇ.೬.೭) ಹೋಲಿಸಿದರೆ, ಕರ್ನಾಟಕದಲ್ಲಿ ನಿರುದ್ಯೋಗ ಪ್ರಮಾಣ ಸರಿಸುಮಾರು ಮೂರನೆಯ ಒಂದರಷ್ಟು ಇದೆ. ಕರ್ನಾಟಕಕ್ಕಿಂತ ಕಡಿಮೆ ನಿರುದ್ಯೋಗ ಪ್ರಮಾಣ ದಾಖಲಿಸಿರುವ ರಾಜ್ಯಗಳು ಅಸ್ಸಾಂ (ಶೇ. ೧.೨), ಚತ್ತೀಸಗಢ (ಶೇ.೨) ಮಾತ್ರ. ಏಪ್ರಿಲ್ ತಿಂಗಳಲ್ಲಿ ಲಾಕ್‌ಡೌನ್ ನಿಯಮಗಳು ಕಠಿಣವಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಶೇ.೨೯.೮ ಇತ್ತು. ಆಗ ರಾಷ್ಟç ಮಟ್ಟದಲ್ಲಿ ನಿರುದ್ಯೋಗ ಪ್ರಮಾಣ ಶೇ. ೨೩.೫. ತಯಾರಿಕೆ ವಲಯಕ್ಕಿಂತ ವೇಗವಾಗಿ ಡಿಜಿಟಲ್ ಮತ್ತು ಐಟಿ ಸೇವಾ ವಲಯದಲ್ಲಿ ಚೇತರಿಕೆ ಕಂಡುಬAದ ಕಾರಣ, ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಗಣನೀಯವಾಗಿ ಇಳಿದಿದೆ. ಜ್ಞಾನಾಧರಿತ ವಲಯಗಳಲ್ಲಿ ಕೆಲಸ ಮಾಡುವವರು ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಕೆಲಸ ಮಾಡಬಲ್ಲರು. ಮಾಹಿತಿ ತಂತ್ರಜ್ಞಾನದಿAದಾಗಿ ಅವರಿಗೆ ಹೆಚ್ಚು ಅವಕಾಶಗಳು ಲಭ್ಯವಾಗುತ್ತಿದ್ದು, ನಿರುದ್ಯೋಗ ಪ್ರಮಾಣ ಇಳಿಯಲು ಇದು ಕಾರಣ ಎಂದು ಸಿಎಂಐಇ ತಿಳಿಸಿವೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top