ಚಂದ್ರನ ಮೇಲೆ ವಿಮಾನ!

ಚಂದ್ರ ಕುಂಭರಾಶಿಯ ಟಿ-ಎಕ್ಯುಆರ್ ನಕ್ಷತ್ರವನ್ನು ಮುಚ್ಚುವ ವೇಳೆ ವಿಮಾನವೊಂದು ಚಂದ್ರನ ಮುಂದಿನಿಂದ ಹಾದು ಹೋದ ಕ್ಷಣಗಳು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಅತುಲ್ ಭಟ್ ಅವರ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕಳೆದ ಅ.26 ರ ಸಂಜೆ 7:29೯ಕ್ಕೆ ಚಂದ್ರ ಕುಂಭ ರಾಶಿಯ ಟಿ-ಎಕ್ಯುಆರ್ ನಕ್ಷತ್ರವನ್ನು ಮುಚ್ಚುವ ಪ್ರಕ್ರಿಯೆ ನಡೆಯಿತು. 317 ಜ್ಯೋತರ‍್ವರ್ಷ ದೂರದಲ್ಲಿರುವ ಸೂರ್ಯನ ವ್ಯಾಸಕ್ಕಿಂತ ೪ ಪಟ್ಟು ದೊಡ್ಡದಾದ ಈ ನಕ್ಷತ್ರವು ಮಸುಕಾಗಿ ಕಾಣಿಸುತ್ತಿದ್ದಂತೆ, ಚಂದ್ರ ಅದರ ಮುಂದೆ ಹಾದು ಹೋದ. ಪುನಃ ಈ ನಕ್ಷತ್ರವು 8.27ಕ್ಕೆ ಗೋಚರಿಸಿತು. ಆಕಾಶದಲ್ಲಿ ಒಂದು ಗ್ರಹ ಅಥವಾ ನಕ್ಷತ್ರದ ಮುಂದಿನಿಂದ ಇನ್ನೊಂದು ಸಣ್ಣ ಗ್ರಹ ಅಥವಾ ಉಪಗ್ರಹವು ಹಾದು ಹೋಗುವ ಪ್ರಕ್ರಿಯೆಯನ್ನು ಸಂಕ್ರಮಣ ಎನ್ನಲಾಗುತ್ತದೆ. ಅಂತೆಯೇ ಸೂರ್ಯ ಹಾಗೂ ಗ್ರಹಗಳು ಒಂದು ರಾಶಿಯ ಮುಂದೆ ಹಾದು ಹೋಗುವುದನ್ನು ಕೂಡ ಸಂಕ್ರಮಣ ಎನ್ನುತ್ತಾರೆ ಎಂದು ಅತುಲ್ ಭಟ್ ತಿಳಿಸಿದ್ದಾರೆ.

Courtesyg: Google (photo)
Journalist,Translator,avid bibliophile

Leave a Reply

Your email address will not be published. Required fields are marked *

Back To Top