ಮೆಣಸಿಗನಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ ಲಾಭ

ಚನ್ನಪಟ್ಟಣ ತಾಲೂಕು ಮೆಣಸಿಗನಹಳ್ಳಿ ಗ್ರಾಮದ  ಹಾಲು ಉತ್ಪಾದಕರ  ಸಹಕಾರ ಸಂಘದ 2019-20ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಬಾಲೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿ ಬಮೂಲ್ ನಿರ್ದೇಶಕ ಎಚ್. ಸಿ. ಜಯಮುತ್ತು ಮಾತನಾಡಿ, ಉತ್ಪಾದಕರಿಗೆ ಒಕ್ಕೂಟದ ವತಿಯಿಂದ ನೀಡುವ ಸವಲತ್ತುಗಳ ಮಾಹಿತಿ ನೀಡಿದರು. ಗುಣಮಟ್ಟದ ಹಾಲು ಪೂರೈಸಿ ಸಂಘವನ್ನು ಏಳಿಗೆಗೆ  ಕೊಂಡೊಯ್ಯಬೇಕೆಂದು ಮನವಿ ಮಾಡಿದಲ್ಲದೆ,  ೨೦೧೯-೨೦ ನೇ ಸಾಲಿನಲ್ಲಿ ಸಂಘವು ೯,೦೬,೦೪೦ ರೂ.ನಿವ್ವಳ ಲಾಭ ಗಳಿಸಿರುವುದಕ್ಕೆ ಆಡಳಿತ ಮಂಡಳಿಯನ್ನು ಅಭಿನಂದಿಸಿದರು. ವಿಸ್ತರಣಾಧಿಕಾರಿ ಹೊನ್ನಪ್ಪ ಪೂಜಾರಿ, ಕೃಷಿ ಅಧಿಕಾರಿ ಜಿತೇಂದ್ರಕುಮಾರ್, ಆಡಳಿತ ಮಂಡಳಿಯ ನಿರ್ದೇಶಕರಾದ ಸಿದ್ಧರಾಜು, ಕರಿಗೌಡ, ಗಂಗಾಧರಯ್ಯ, ಶಿವಮಾದೇಗೌಡ, ದೇವರಾಜ್, ಅಪ್ಪಾಜಿ, ಚಂದ್ರೇಗೌಡ, ಕೃಷ್ಣೇಗೌಡ, ಗಿರಿಜಮ್ಮ, ಜಯಶೀಲ ಸ್ವಾಮಿ, ಮುಖ್ಯ ಕಾರ್ಯನಿರ್ವಾಹಕ ಚನ್ನಪ್ಪ, ಸಿಬ್ಬಂದಿ ವರ್ಗ, ಸದಸ್ಯರು ಹಾಗೂ ಗ್ರಾಮಸ್ಥರು  ಹಾಜರಿದ್ದರು.

Journalist,Translator,avid bibliophile

Leave a Reply

Your email address will not be published. Required fields are marked *

Back To Top