ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿಯ ಕಾಯ್ದೆ (ರೇರಾ) ಜತೆಗೆ, ಫ್ಲ್ಯಾಟ್ ಖರೀದಿದಾರರು ಸೇವೆಯಲ್ಲಿನ ಲೋಪಗಳ ವಿರುದ್ಧ ಗ್ರಾಹಕ ರಕ್ಷಣಾ ಕಾಯ್ದೆ ಅಡಿ ಪರಿಹಾರ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಫ್ಲ್ಯಾಟ್ ನೀಡಿಕೆಯಲ್ಲಿ ವಿಳಂಬದಿAದ ಗ್ರಾಹಕರು ಪಾವತಿಸಿರುವ ಹಣ ಮತ್ತು 50.000 ರೂ. ವೆಚ್ಚವನ್ನು ಹಿಂತಿರುಗಿಸಿ ಎಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ನೀಡಿದ್ದ ನಿರ್ದೇಶನದ ವಿರುದ್ಧ ಇಂಪೀರಿಯಾ ಸ್ಟ್ರಕ್ಚರ್ಸ್ ಲಿಮಿಟೆಡ್ ಅರ್ಜಿ ಸಲ್ಲಿಸಿತ್ತು. ಪ್ರಾಜೆಕ್ಟ್ನ್ನು ರೇರಾ ಅಡಿ ನೋಂದಣಿ ಮಾಡಲಾಗಿದೆ. ಹೀಗಾಗಿ ಬೇರೆ ಕಾಯ್ದೆ ಅಡಿ ಸಲ್ಲಿಸಿದ ಅರ್ಜಿಗಳನ್ನು ಮಾನ್ಯ ಮಾಡಬಾರದು ಎಂಬ ಇಂಪೀರಿಯಾ ಸ್ಟ್ರಕ್ಚರ್ಸ್ ವಾದವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಗ್ರಾಹಕ ರಕ್ಷಣಾ ಕಾಯ್ದೆ ಅಡಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಆಯೋಗ ಅಥವಾ ಮಂಡಳಿ ರಿಯಲ್ ಎಸ್ಟೇಟ್ಗೆ ಸಂಬAಧಿಸಿದ ಅರ್ಜಿಯನ್ನು ಮಾನ್ಯ ಮಾಡಬಾರದು ಎಂದು ರೇರಾ ಕಾಯ್ದೆಯ 79ನೇ ಸೆಕ್ಷನ್ ಹೇಳುವುದಿಲ್ಲ. ರೇರಾ ಅಥವಾ ಗ್ರಾಹಕ ರಕ್ಷಣಾ ಕಾಯ್ದೆ ಅಡಿ ಮೊಕದ್ದಮೆ ಹೂಡಲು ಅವಕಾಶ ಇರಲಿ ಎಂಬ ಸಂಸತ್ತಿನ ಉದ್ದೇಶವು ರೇರಾ ಕಾಯ್ದೆಯಲ್ಲಿ ಸ್ಪಷ್ಟವಾಗಿ ಕಾಣುತ್ತದೆ’ ಎಂದು ನ್ಯಾಯಮೂರ್ತಿಗಳಾದ ಉದಯ್ ಲಲಿತ್ ಮತ್ತು ವಿನೀತ್ ಸರಣ್ ಅವರಿದ್ದ ಪೀಠವು ಹೇಳಿದೆ.
Courtesyg: Google (photo)