ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶೀಘ್ರದಲ್ಲೇ ಇನ್ನೊಂದು ಸುತ್ತಿನ ಆರ್ಥಿಕ ಪುನಶ್ಚೇತನ ಪ್ಯಾಕೇಜ್ ಘೋಷಿಸಲಿದ್ದಾರೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್ ಮಂಗಳವಾರ ತಿಳಿಸಿದ್ದಾರೆ. ಅರ್ಥ ವ್ಯವಸ್ಥೆಯ ವಿವಿಧ ಭಾಗಗಳ ಮನವಿ/ಸಲಹೆಗಳನ್ನು ಹಣಕಾಸು ಸಚಿವಾಲಯ ಪರಿಶೀಲಿಸುತ್ತಿದೆ. ಹೊಸ ಪ್ಯಾಕೇಜ್ ಶೀಘ್ರವೇ ಘೋಷಣೆ ಆಗಲಿದೆ. ಹಣಕಾಸು ಸಚಿವೆ ಈ ಬಗ್ಗೆ ವಿವರ ನೀಡಲಿದ್ದಾರೆ ಎಂದು ಬಜಾಜ್ ಹೇಳಿದರು. ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸಲು ಹಾಗೂ ಬಂಡವಾಳ ವೆಚ್ಚ ಹೆಚ್ಚು ಮಾಡಲು ಕೇಂದ್ರ ಸರ್ಕಾರ ಹಲವು ಕ್ರಮ ಕೈಗೊಂಡಿತ್ತು. ಆಹಾರ ವಸ್ತುಗಳ ಬೆಲೆ ಹೆಚ್ಚಳ ಕುರಿತು ಪ್ರತಿಕ್ರಿಯಿಸಿದ ಬಜಾಜ್, ಇದು ತಾತ್ಕಾಲಿಕ. ಬೆಲೆ ನಿಯಂತ್ರಿಸಲು ಸರ್ಕಾರ ಕೆಲವು ಕ್ರಮ ಕೈಗೊಂಡಿದೆ. ಬೆಲೆ ಏರಿಕೆ ಮತ್ತು ಸರಕು ಸಾಗಣೆಗೂ ನಂಟಿದೆ. ಹೊಸದಾಗಿ ಕಟಾವಾದ ಬೆಳೆ ಮಾರುಕಟ್ಟೆಗೆ ಬಂz ಬಳಿಕÀ ಬೆಲೆ ತಗ್ಗಲಿದೆ ಎಂದರು.