ತಂತ್ರಜ್ಞಾನ ಶೃಂಗಸಭೆ ನ.19ರಿಂದ

ಬೆಂಗಳೂರು ತಂತ್ರಜ್ಞಾನ ಶೃಂಗಸಭೆ–2020(ಬೆAಗಳೂರು ಟೆಕ್ ಸಮ್ಮಿಟ್) ಇದೇ ೧೯ ರಿಂದ 21ರವರೆಗೆ ನಡೆಯಲಿದ್ದು, ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಕಾರ್ಯಕ್ರಮ ಚಾಲನೆ ನೀಡಲಿದ್ದಾರೆ. ಈ ಬಾರಿಯ ಶೃಂಗಸಭೆಯ ವಿಷಯ ಭವಿಷ್ಯ ಈಗಲೇ(ನೆಕ್ಸ್ಟ್ ಈಸ್ ನೌ)ಎಂದು ನಿರ್ಧರಿಸಲಾಗಿದೆ ಎಂದು ಐಟಿ–ಬಿಟಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತಿಳಿಸಿದರು. ಕೋವಿಡ್‌ನಿಂದಾಗಿ ವರ್ಚುವಲ್ ಆಗಿ ನಡೆಸಬೇಕಾಗಿದೆ. ೨೫ಕ್ಕೂ ಹೆಚ್ಚು ದೇಶಗಳು ಈ ಸಭೆಯಲ್ಲಿ ಪಾಲ್ಗೊಳ್ಳಿದ್ದು. ವಿಜ್ಞಾನ, ತಂತ್ರಜ್ಞಾನ, ಐಟಿ ಮತ್ತು ಬಿಟಿ ಕ್ಷೇತ್ರದಲ್ಲಿ ಬೆಂಗಳೂರು ದೇಶಕ್ಕೆ ನಂಬರ್ 1  ಆಗಿದೆ. ಮುಂದಿನ ದಿನಗಳಲ್ಲಿ ವಿಶ್ವದ ರಾಜಧಾನಿಯಾಗಬೇಕು ಬೆಳೆಯಲಿದೆ. ಅಷ್ಟೇ ಅಲ್ಲ, 2025ರ ವೇಳೆಗೆ ಕರ್ನಾಟಕದ ಆರ್ಥಿಕತೆ ಈ ಕ್ಷೇತ್ರದಲ್ಲಿ ಒಂದು ಟ್ರಿಲಿಯನ್ ಡಾಲರ್ಗಳಿಗೆ(74.76 ಲಕ್ಷ ಕೋಟಿ) ತಲುಪಬೇಕು. ಕೃಷಿ ಕ್ಷೇತ್ರದಲ್ಲೂ ಮುಂಚೂಣಿಗೆ ಬರುವ ಮೂಲಕ ರಾಜ್ಯದ ಜಿಡಿಎಸ್‌ಪಿ ಶೇ.16ರಿಂದ ಶೇ.೩೦ಕ್ಕೆ ತಲುಪಬೇಕು ಎಂದು ಅಶ್ವತ್ಥನಾರಾಯಣ ತಿಳಿಸಿದರು. ಬಯೋಕಾನ್ನ ಕಿರಣ್ ಮಜುಂದಾರ್ ಷಾ ಮಾತನಾಡಿ, ಈ ಬಾರಿಯ ಜೈವಿಕ ತಂತ್ರಜ್ಞಾನದ ಅಧಿವೇಶನವು ಕೃತಕ ಬುದ್ಧಿಮತ್ತೆ ಮತ್ತು ಬಿಗ್ ಡೇಟಾ ಕೇಂದ್ರೀಕೃತವಾಗಿರಲಿದೆ. ಜೈವಿಕ ಮತ್ತು ಕಂಪ್ಯೂಟರ್ ವಿಜ್ಞಾನ ಸಂಬAಧಿಸಿದ ಕ್ಷೇತ್ರಗಳಲ್ಲಿನ ಅತ್ಯಾಧುನಿಕ ತಂತ್ರಜ್ಞಾನಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಸಿಆರ್‌ಐಎಸ್‌ಪಿಆರ್–ಕ್ಯಾಸ್ 9, ಜೆನೋಮಿಕ್ಸ್, ರೀಜನರೇಟಿವ್ ಬಯಾಲಜಿ ಒಳಗೊಂಡ ಜೈವಿಕ ತಂತ್ರಜ್ಞಾನ ಕುರಿತು ಅಧಿವೇಶನ ಏರ್ಪಡಿಸಲಾಗುವುದು ಎಂದು ಹೇಳಿದರು. ಮಂಡನೆಯಾಗುವ ವಿಷಯಗಳು: ಕೃತಕ ಬುದ್ಧಿಮತ್ತೆ, ಇಂಟರ್‌ನೆಟ್ ಆಫ್ ಥಿಂಗ್ಸ್, ವರ್ಚುವಲ್ ರಿಯಾಲಿಟಿ, ವೈಮಾಂತರಿಕ್ಷ, ರಕ್ಷಣಾ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಸೆಮಿಕಂಡಕ್ಟರ್, ಡಿಜಿಟಲ್, ಕೋವಿಡ್–19 ಪಿಡುಗು ನಿಯಂತ್ರಣದ ಸಿದ್ಧತೆ ಪ್ರಮುಖವಾದವು ಎಂದು ತಿಳಿಸಿದರು.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top