ದೇಶಿ ಕೋವಿಡ್–19 ಲಸಿಕೆ ಮುಂಬರುವ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಎಂದು ಐಸಿಎಂಆರ್‌ನ ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ. ಮನುಷ್ಯರ ಮೇಲೆ ನಡೆಸಿರುವ ಪ್ರಯೋಗದಲ್ಲಿ ಲಸಿಕೆ ಪರಿಣಾಮಕಾರಿ ಮತ್ತು ಸುರಕ್ಷಿತವೆಂದು ತಿಳಿದು ಬಂದಿದೆ. ಈ ತಿಂಗಳು ಲಸಿಕೆಯ ಕೊನೆಯ ಹಂತದ ಪ್ರಯೋಗ ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ. ಐಸಿಎಂಆರ್ ಮತ್ತು ಭಾರತ್ ಬಯೋಟೆಕ್ ಕಂಪನಿ ‘ಕೋವ್ಯಾಕ್ಸಿನ್’ ಲಸಿಕೆ ಅಭಿವೃದ್ಧಿ ಪಡಿಸುತ್ತಿವೆ. ಲಸಿಕೆ ಫೆಬ್ರವರಿಯಲ್ಲಿ ಬಿಡುಗಡೆ ಮಾಡುವ ಭರವಸೆ ವ್ಯಕ್ತವಾಗಿತ್ತು. ಆದರೆ, ಮುಂಚಿತವಾಗಿಯೇ ಲಸಿಕೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಐಸಿಎಂಆರ್‌ನ ವಿಜ್ಞಾನಿ ರಜನಿಕಾಂತ್ ಹೇಳಿದ್ದಾರೆ. ಫೆಬ್ರವರಿಯಲ್ಲಿ ಕೋವ್ಯಾಕ್ಸಿನ್ ಬಿಡುಗಡೆಯಾದರೆ, ಮೊದಲ ದೇಶಿ ಕೋವಿಡ್–19 ಲಸಿಕೆ ಹೊರಬಂದಂತಾಗಲಿದೆ. ಪ್ರಾಣಿಗಳ ಮೇಲೆ ನಡೆಸಿರುವ ಅಧ್ಯಯನ ಹಾಗೂ ಮನುಷ್ಯರ ಮೇಲೆ ನಡೆಸಲಾದ ಒಂದು ಮತ್ತು 2ನೇ ಹಂತದ ಪ್ರಯೋಗಗಳಲ್ಲಿ ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ತಿಳಿದುಬಂದಿದೆ. ಆದರೆ, 3ನೇ ಹಂತದ ಪ್ರಯೋಗ ಪೂರ್ಣಗೊಳ್ಳುವವರೆಗೂ ಶೇ.100ರಷ್ಟು ಖಾತ್ರಿ ನೀಡಲು ಸಾಧ್ಯವಾಗದು’ ಎಂದು ಹೇಳಿದ್ದಾರೆ.
Courtesyg: Google (photo)