ಸರ್ಕಾರಿ ಐಟಿಐ ಮೇಲ್ದರ್ಜೆಗೆ

ರಾಜ್ಯ ಸರ್ಕಾರ ಮತ್ತು ಟಾಟಾ ಟೆಕ್ನಾಲಜೀಸ್ ಒಟ್ಟಾಗಿ 4.636 ಕೋಟಿ ರೂ. ವೆಚ್ಚದಲ್ಲಿ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಉನ್ನತೀಕರಿಸುವ ಒಪ್ಪಂದಕ್ಕೆ ಸಹಿ ಹಾಕಿವೆ. ಯೋಜನೆಯ ಶೇ.೮೦ರಷ್ಟು ವೆಚ್ಚವನ್ನು ಟಾಟಾ ಟೆಕ್ನಾಲಜೀಸ್ ಹಾಗೂ ರಾಜ್ಯ ಸರ್ಕಾರ ಶೇ.80ರಷ್ಟು ವೆಚ್ಚ ಭರಿಸಲಿದೆ. ಈ ಸಂಬAಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪ ಮುಖ್ಯ ಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಉಪಸ್ಥಿತಿಯಲ್ಲಿ ಜೀವನೋಪಾಯ ಮತ್ತು ಕೌಶಲಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ಹಾಗೂ ಟಾಟಾ ಟೆಕ್ನಾಲಜೀಸ್ ಅಧ್ಯಕ್ಷ ಆನಂದ್ ಭಿಡೆ ಒಪ್ಪಂದಕ್ಕೆ ಸಹಿ ಹಾಕಿದರು. ಎಲ್ಲ ಜಿಲ್ಲೆಗಳ ಸರ್ಕಾರಿ ಐಟಿಐಗಳನ್ನು ಉನ್ನತೀಕರಿಸಲಾಗುತ್ತಿದ್ದು, ಟಾಟಾ ಟೆಕ್ನಾಲಜೀಸ್ 4,080  ಕೋಟಿ ರೂ.ವೆಚ್ಚಮಾಡಲಿದೆ.ರಾಜ್ಯ ಸರ್ಕಾರ ಐಟಿಐಗಳ ಉನ್ನತೀಕರಣಕ್ಕೆ 566 ಕೋಟಿ ರೂ.ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ 105 ಕೋಟಿ ರೂ. ವೆಚ್ಚ ಮಾಡಲಿದೆ. ಕೈಗಾರಿಕಾ ಕ್ಷೇತ್ರದ ಅಗತ್ಯಕ್ಕೆ ಅನುಗುಣವಾಗಿ ಐಟಿಐಗಳ ಪಠ್ಯಕ್ರಮ ಸುಧಾರಣೆ ಯೋಜನೆಯ ಗುರಿ. ಟಾಟಾ ಟೆಕ್ನಾಲಜೀಸ್ ಜತೆ 20 ಕೈಗಾರಿಕೆಗಳು ಯೋಜನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಐಟಿಐಗಳಲ್ಲಿ ಅತ್ಯಾಧುನಿಕ ಯಂತ್ರೋಪಕರಣ, ತಂತ್ರಾAಶ, ಹೊಸ ಪಠ್ಯಕ್ರಮ ಹಾಗೂ ಸ್ಮಾರ್ಟ್ ಉತ್ಪಾದನಾ ವಿಧಾನ ಅಳವಡಿಕೆ ಯೋಜನೆಯ ಭಾಗ ಎಂದರು. ಸಚಿವ ಅಶ್ವತ್ಥನಾರಾಯಣ ಮಾತನಾಡಿ, ಕಾರ್ಯಕ್ರಮದಿಂದ ವಾರ್ಷಿಕ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶ ಲಭಿಸಲಿದೆ. ಮುಂದಿನ ವರ್ಷದಿಂದ ಐಟಿಐಗಳಲ್ಲಿ 10 ಹೊಸ ಕೋರ್ಸ್ ಆರಂಭಿಸಲಾಗುವುದು. ಮೊದಲ ಹಂತದಲ್ಲಿ ಪೀಣ್ಯ, ಹೊಸೂರು ರಸ್ತೆ, ಬಳ್ಳಾರಿ, ಮೈಸೂರು, ದಸ್ತಿಕೊಪ್ಪ ಮತ್ತು ಶಿಕಾರಿಪುರದ ಐಟಿಐಗಳನ್ನು ಉನ್ನತೀಕರಿಸಲಾಗುತ್ತದೆ ಎಂದರು.  ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಟಾಟಾ ಟೆಕ್ನಾಲಜೀಸ್ ಸಿಇಒ ಮತ್ತು ಇಡಿ ವಾರನ್ ಹ್ಯಾರಿಸ್, ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ ಭಾಗವಹಿಸಿದ್ದರು.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top