ಹೆದ್ದಾರಿಗೆ 20 ಸಾವಿರ ಮರ ಬಲಿ

ಬೆಂಗಳೂರು- ಚೆನ್ನೈ ಎಕ್ಸ್ಪ್ರೆಸ್ ಹೆದ್ದಾರಿಯ ಮೊದಲ ಹಂತದ(71 ಕಿ.ಮೀ) ಕಾಮಗಾರಿಯಲ್ಲಿ 20,748 ಮರಗಳನ್ನು ಕತ್ತರಿಸಬೇಕಾಗುತ್ತದೆ. ಯೋಜನೆಯಿಂದ 30 ಸಾವಿರ ಜನರ ಬದುಕಿನ  ಮೇಲೆ  ಪರಿಣಾಮವಾಗಲಿದೆ ಎಂದು ವರದಿಯೊಂದ ತಿಳಿಸಿದೆ.

330 ಕಿ.ಮೀ ಉದ್ದದ ಈ ಎಕ್ಸ್ಪ್ರೆಸ್ ಹೆದ್ದಾರಿ ಮೂರು ಹಂತಗಳಲ್ಲಿ ಅನುಷ್ಠಾನಗೊಳ್ಳಲಿದೆ. ಮೊದಲ ಹಂತ ಬೆಂಗಳೂರಿನಿAದ ಆರಂಭವಾಗಿ ಮುಳಬಾಗಿಲು ಬೇತಮಂಗಲ ಬಳಿ ಕೊನೆಯಾಗಲಿದೆ.  ಹೆದ್ದಾರಿ ಕಾಮಗಾರಿಗೆ ಕೋಲಾರದಲ್ಲಿ ಹೆಚ್ಚು ಮರಗಳು(ಶೇ.85) ನಾಶವಾಗಲಿದೆ. ಮಾವು, ತೆಂಗು, ಸಾಗವಾನಿ, ಪೇರಳೆ, ಕಹಿಬೇವು, ಹುಣಸೆ ಮರಗಳನ್ನು ಕಳೆದುಕೊಳ್ಳುವುದರಿಂದ ಜಿಲ್ಲೆಯ ಪರಿಸರ ಹಾಗೂ ರೈತರ ಬದುಕಿನ ಮೇಲೂ ಪರಿಣಾಮವುಂಟಾಗಲಿದೆ. ಮೊದಲ ಹಂತದಲ್ಲಿ ಹೆದ್ದಾರಿ 72 ಗ್ರಾಮಗಳ ಮೂಲಕ ಹಾದು ಹೋಗಲಿದ್ದು, 1,890ಎಕರೆ ಭೂಸ್ವಾಧೀನ ಮಾಡಿಕೊಳ್ಳಬೇಕಾಗುತ್ತದೆ. ಇದರಿಂದ  5,611 ಕುಟುಂಬಗಳ 28,055 ಮಂದಿ ಮೇಲೆ ಪರಿಣಾಮ ಉಂಟಾಗಲಿದೆ. 344ಕುಟುಂಬಗಳ 1,720 ಮಂದಿಗೆ ಪುನರ್ವಸತಿ ಕಲ್ಪಿಸಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 2018ರಲ್ಲಿ ಈ ಯೋಜನೆಗೆ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಅನುಮತಿ ಕೇಳಿತ್ತು.

ಹೆದ್ದಾರಿಯಿಂದ ಕೆಜಿಎಫ್‌ನಲ್ಲಿರುವ ಕೈಗಾರಿಕೆಗಳ ಪುನಃಶ್ಚೇತನ ಆಗಲಿದೆ ಎಂದು ಎರಡೂ ರಾಜ್ಯಗಳ ಉದ್ಯಮಿಗಳು ಸ್ವಾಗತಿಸಿದ್ದಾರೆ. ಎಕ್ಸ್ಪ್ರೆಸ್ ಹೆದ್ದಾರಿ ನಿರ್ಮಾಣ ಪ್ರಸ್ತಾಪ ಚೆನ್ನೈ-ಬೆಂಗಳೂರು ಆರ್ಥಿಕ ಕಾರಿಡಾರ್ ಯೋಜನೆಯ ರೂಪರೇಷೆ ಸಿದ್ಧಗೊಳ್ಳುವುದಕ್ಕೆ ಮುನ್ನವೇ ಚಾಲ್ತಿಯಲ್ಲಿತ್ತು.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top