ಹೂಡಿಕೆದಾರರು ಈಕ್ವಿಟಿ ಮ್ಯೂಚುವಲ್ ಫಂಡ್ಗಳಿಂದ ಅಕ್ಟೋಬರ್ನಲ್ಲಿ 14,344 ಕೋಟಿ ರೂ. ಬಂಡವಾಳ ಹಿಂಪಡೆದಿದ್ದಾರೆ. ಜೂನ್ ಬಳಿಕ ಒಟ್ಟು 37,498 ಕೋಟಿ ರೂ. ಬಂಡವಾಳ ಹಿಂಪಡೆದಂತಾಗಿದೆ. ದೇಶಿ ಆರ್ಥಿಕತೆಯ ಮಂದಗತಿಯ ಬೆಳವಣಿಗೆ ಹಾಗೂ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಕುರಿತ ಆತಂಕದಿಂದಾಗಿ ಬಂಡವಾಳ ಹೊರಹರಿಯುತ್ತಿದೆ ಎಂದು ಫಿನಾಲಜಿ ಕಂಪನಿಯ ಸಿಇಒ ಪ್ರಂಜಲ್ ಕಮ್ರಾ ಹೇಳಿದ್ದಾರೆ.
ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಷೇರು ಸಂಬಂಧಿತ ಮ್ಯೂಚುವಲ್ ಫಂಡ್ ಯೋಜನೆಗಳಿಂದ 7,200 ಕೋಟಿ ರೂ. ಹೊರಹೋಗಿದ್ದು, ಸಿಪ್(ವ್ಯವಸ್ಥಿತ ಹೂಡಿಕೆ ಯೋಜನೆ) ಮೂಲಕ ಬಂಡವಾಳ ಒಳಹರಿವಿನಲ್ಲೂ ಇಳಿಕೆ ಆಗಿದೆ. ಲಾಭ ಗಳಿಕೆ ಹಾಗೂ ಅನಿಶ್ಚಿತ ಸ್ಥಿತಿಯಿಂದ ಕೈಯಲ್ಲಿ ಒಂದಷ್ಟು ನಗದು ಇರಲಿ ಎಂದು ಬಂಡವಾಳ ಹಿಂಪಡೆದಿದ್ದಾರೆ ಎಂದು ಗ್ರೋ ಸಂಸ್ಥೆಯ ಸಹ ಸ್ಥಾಪಕ ಹರ್ಷ್ ಜೈನ್ ಹೇಳಿದ್ದಾರೆ. 2020ರ ಜನವರಿ-ಮೇನಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್ಗಳಲ್ಲಿ 40 ಸಾವಿರ ಕೋಟಿಗೂ ಅಧಿಕ ಮೊತ್ತ ಹೂಡಿಕೆಯಾಗಿತ್ತು ಎಂದು ಸೆಬಿ ಹೇಳಿದೆ.
Courtesyg: Google (photo)