ಡ್ರೀಜ್ ನರೇಗಾ ಯೋಜನೆ ಪರಿಕಲ್ಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರಲ್ಲದೆ, ಕಾಯಿದೆಯ ಕರಡು ಸಿದ್ಧಪಡಿಸಲು ನೆರವಾಗಿದ್ದರು. ಮಾಹಿತಿ ಹಕ್ಕು ಕಾಯಿದೆ ಹಾಗೂ ಆಹಾರ ಭದ್ರತೆ ಕಾಯಿದೆಗೂ ಅವರ ಕೊಡುಗೆ ಇದೆ. ರೈಲು ಮತ್ತು ಬಸ್‌ಗಳಲ್ಲಿ ಪ್ರಯಾಣಿಸುವ ಹಾಗೂ ಗ್ರಾಮಗಳ ಹಟ್ಟಿಗಳಲ್ಲಿ ತಂಗುವ ಸಂತ ಅರ್ಥಶಾಸ್ತ್ರಜ್ಞಾಅವರು. ಲೂವೆನ್‌ನಲ್ಲಿ ೧೯೫೯ರಲ್ಲಿ ಜನಿಸಿದ ಜೀನ್ ಅವರ ತಂದೆ ಜಾಕ್ ಡ್ರೀಜ್, ಜಗತ್ತಿನ ಶ್ರೇಷ್ಠ ಅರ್ಥಶಾಸ್ತ್ರಜ್ಞಾರಲ್ಲಿ ಒಬ್ಬರು ಮತ್ತು ಪ್ರಸಿದ್ಧ ಶಿಕ್ಷಕ. ಜಾಕ್ ಹಾಗೂ ಅವರ ಪತ್ನಿ ಸಾಮಾಜಿಕ ಕಳಕಳಿಯುಳ್ಳವರು. ಒಬ್ಬ ಸೋದರ ಎಡಪಂಥೀಯ ಚಿಂತನೆಯ ರಾಜಕಾರಣಿ, ಇನ್ನೊಬ್ಬರು ಮಾರುಕಟ್ಟೆ ವಿಷಯದ ಪ್ರಾಧ್ಯಾಪಕ ಹಾಗೂ ಮತ್ತೊಬ್ಬರು ಅನುವಾದಕ. ಎಸೆಕ್ಸ್ ವಿವಿಯಿಂದ ಪದವಿ ಪಡೆದ ಜೀನ್, ಬಳಿಕ ಅಭೀವೃದ್ಧಿ ಅರ್ಥಶಾಸ್ತ್ರದೆಡೆಗೆ ಸೆಳೆಯಲ್ಪಟ್ಟು, ದಿಲ್ಲಿಯ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ ಸೇರಿದರು. ಅಲ್ಲಿ ಅವರಿಗೆ ಅಮರ್ತ್ಯ ಸೇನ್ ಜತೆಯಾದರು. ಇಬ್ಬರೂ ಈವರೆಗೆ ನಾಲ್ಕು ಪುಸ್ತಕ ಬರೆದಿದ್ದಾರೆ. ಪುಸ್ತಕದ ಶೇ.೯೦ ರಷ್ಟು ಕೆಲಸ ಜೀನ್ ಮಾಡುತ್ತಾರೆ ಮತ್ತು ಶೇ.೯೦ರಷ್ಟು ಖ್ಯಾತಿ ನನಗೆ ಬರುತ್ತದೆ ಎಂಬ ಒಮ್ಮೆ ಪ್ರೊ. ಸೇನ್ ತಮಾಷೆ ಮಾಡಿದ್ದರು. ಇದು ಉತ್ಪೆçÃಕ್ಷೆಯಷ್ಟೆ. ಈ ಪುಸ್ತಕಗಳ ಓದುಗರು ಇಬ್ಬರಿಗೂ ಆಭಾರಿಗಳು. ಭಾರತದಲ್ಲೇ ನೆಲೆಸಲು ನಿರ್ಧರಿಸಿದ ಡ್ರೀಜ್, ಅರ್ಥಶಾಸ್ತ್ರ ಸಂಶೋಧನೆಯಲ್ಲಿ ಅತ್ಯುತ್ತಮ ಸ್ಥಾನ ಗಳಿಸಿರುವ ದಿಲ್ಲಿ ಸ್ಕೂಲ್‌ನಲ್ಲಿ ಪ್ರಾಧ್ಯಾಪಕರಾಗಿ ಸೇರಿದರು. ನಂತರ ಅಲಹಬಾದ್ ವಿವಿ ಹಾಗೂ ಈಗ ರಾಂಚಿಯಲ್ಲಿದ್ದಾರೆ. ಹೆಚ್ಚು ಬಡತನವಿರುವ ಪ್ರದೇಶಗಳ ಅನುಕೂಲವಂಚಿತ ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಅಭಿವೃದ್ಧಿ ಅರ್ಥಶಾಸ್ತ್ರಜ್ಞಾನಾಗಿ ಅವರ ಧರ್ಮ. ಸಂತನಂತಹ ಅವರ ವ್ಯಕ್ತಿತ್ವಕ್ಕೆ ಇದು ಸರಿಯಾಗಿಯೇ ಇದೆ. ಅವರು ಸಂಬಳ ತೆಗೆದುಕೊಳ್ಳುವುದಿಲ್ಲ. ತಮ್ಮ ಕನಿಷ್ಠ ಅಗತ್ಯಗಳನ್ನು ಪುಸ್ತಕದ ರಾಯಧನ ಹಾಗೂ ಪತ್ರಿಕೆಗಳಿಗೆ ಬರೆಯುವ ಲೇಖನಗಳ ಗೌರವಧನದಿಂದ ಪೂರೈಸಿಕೊಳ್ಳುತ್ತಾರೆ. ರಾಮಚಂದ್ರ ಗುಹಾ
ಬೆಲೆ:- 90 ಪುಟ ಸಂಖ್ಯೆ:- 92=4