ಲಾನಿನೊ: ರಾಜ್ಯದಲ್ಲಿ ಚಳಿ ಹೆಚ್ಚಳ

ಫೆಸಿಪಿಕ್ ಸಾಗರದಲ್ಲಿ ನೀರಿನ ಮೇಲ್ಮೆ ತಾಪಮಾನ ಕಡಿಮೆಯಾಗಿರುವುದರಿಂದ ರಾಜ್ಯದಲ್ಲಿ ಹಿಂಗಾರು ಕ್ಷೀಣಿಸಿದ್ದು, ಚಳಿ ಹೆಚ್ಚುತ್ತಿದೆ. ಫೆಸಿಪಿಕ್ ಸಾಗರದ ನಿನೊ-3 ಭಾಗದಲ್ಲಿ ನೀರಿನ ಉಷ್ಣಾಂಶ 0.5 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾದಾಗ ಹವಾಮಾನದಲ್ಲಿ ಬದಲಾವಣೆಗಳು ಉಂಟಾಗುತ್ತವೆ. ಇದನ್ನು ಲಾನಿನೊ ಎನ್ನಲಾಗುತ್ತದೆ. ಉತ್ತರದಿಂದ ಬೀಸುವ ಗಾಳಿಯಿಂದಾಗಿ ತಾಪಮಾನ ಕಡಿಮೆ ಆಗುತ್ತದೆ. ಮೂರು ಅಥವಾ ನಾಲ್ಕು ವರ್ಷಗಳಿಗೊಮ್ಮೆ ಅತಿ ಕಡಿಮೆ ತಾಪಮಾನ ದಾಖಲಾಗುತ್ತದೆ. ಲಾನಿನೊದಿಂದ ಬೀದರ್‌ನಲ್ಲಿ ಬುಧವಾರ 7.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 16 , ರಾಯಚೂರು 13 ಮತ್ತು ಕಲಬುರ್ಗಿಯಲ್ಲಿ ೧16.2 ಡಿಗ್ರಿ ಸೆಲ್ಸಿಯಸ್ ತಾಪಮಾನ ಇತ್ತು. ಕಳೆದ ನವೆಂಬರ್‌ನ ಮೊದಲ ವಾರದಲ್ಲೇ ಮೈ ಕೊರೆಯುವ ಚಳಿ ಆರಂಭವಾಗಿತ್ತು. ಈ ವರ್ಷ ಎರಡನೇ ವಾರದಿಂದ ಚಳಿ ಶುರುವಾಗಿದೆ. ದೀಪಾವಳಿ ಮುಗಿಯುವವರೆಗೆ ಕನಿಷ್ಠ ಉಷ್ಣಾಂಶ10 ರಿಂದ12 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಇರಲಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top