ಲಕ್ಷ್ಮೀ ವಿಲಾಸ್ ಠೇವಣಿದಾರರ ಹಣ ಬ್ಯಾಂಕ್‌ನಲ್ಲಿ ಸುರಕ್ಷಿತವಾಗಿದೆ. ಠೇವಣಿದಾರರಿಗೆ ಹಿಂದಿರುಗಿಸಲು ಅಗತ್ಯ ಇರುವಷ್ಟು ಹಣ ಇದೆ ಎಂದು ಲಕ್ಷ್ಮೀ ವಿಲಾಸ್ ಬ್ಯಾಂಕಿನ(ಎಲ್‌ವಿಬಿ) ಆಡಳಿತ ಅಧಿಕಾರಿ ಟಿ.ಎನ್. ಮನೋಹರನ್ ತಿಳಿಸಿದರು. ಬ್ಯಾಂಕ್ ವಹಿವಾಟಿನ ಮೇಲೆ ನಿರ್ಬಂಧ ವಿಧಿಸಿದ ಕ್ರಮವು ಮಂಗಳವಾರ ತಡರಾತ್ರಿ ನಡೆದಿರುವುದರಿಂದಾಗಿ ಬ್ಯಾಂಕ್ ಶಾಖೆಗಳು, ಎಟಿಎಂಗಳಲ್ಲಿ ಕೆಲವು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಗುರುವಾರದ ಹೊತ್ತಿಗೆ ಎಲ್ಲವೂ ಸರಿಹೋಗಲಿದೆ. ಠೇವಣಿದಾರರು ಹಣ ಪಡೆಯಲು ಸಮಸ್ಯೆ ಆಗದಂತೆ ನೋಡಿಕೊಳ್ಳಲು ಎಲ್ಲಾ ಶಾಖೆಗಳಿಗೂ ಸೂಚನೆ ನೀಡಲಾಗಿದೆ. ಬ್ಯಾಂಕ್ ಬಳಿ, 20ಸಾವಿರ ಕೋಟಿ ರೂ. ಠೇವಣಿ ಮತ್ತು 17.000 ಕೋಟಿ ರೂ. ಮುಂಗಡ ಇದೆ ಎಂದರು. ಬ್ಯಾಂಕಿನಲ್ಲಿ ಠೇವಣಿ ಇರಿಸಿರುವವರು ಉನ್ನತ ಶಿಕ್ಷಣ, ಮದುವೆ, ವೈದ್ಯಕೀಯ ವೆಚ್ಚದಂತಹ ತುರ್ತು ಅಗತ್ಯಗಳಿಗಾಗಿ 5 ಲಕ್ಷ ರೂ. ವರೆಗೂ ಹಣ ಹಿಂಪಡೆಯಬಹುದು. ಆದರೆ ಇದಕ್ಕೆ ಅಗತ್ಯ ದಾಖಲೆಗಳನ್ನು ನೀಡಬೇಕಾಗುತ್ತದೆ ಎಂದರು. ಆರ್‌ಬಿಐ ನಿಗದಿಪಡಿಸಿರುವ ಡಿಸೆಂಬರ್ 16ರ ಗಡುವಿನ ಒಳಗಾಗಿ ಎಲ್‌ವಿಬಿ, ಡಿಬಿಎಸ್ ಬ್ಯಾಂಕ್ ಇಂಡಿಯಾದೊAದಿಗೆ ವಿಲೀನವಾಗುವ ವಿಶ್ವಾಸವಿದೆ. ವಿಲೀನದಿಂದ ಯಾರೂ ಕೆಲಸ ಕಳೆದುಕೊಳ್ಳುವುದಿಲ್ಲ. ಬ್ಯಾಂಕ್ ಸಿಬ್ಬಂದಿಯ ಉದ್ಯೋಗ ಭದ್ರತೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು. ಎಲ್‌ವಿಬಿಯನ್ನು ಡಿಬಿಎಸ್ ಬ್ಯಾಂಕ್‌ನೊAದಿಗೆ ವಿಲೀನಗೊಳಿಸುವುದನ್ನು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ(ಎಐಬಿಒಸಿ) ವಿರೋಧಿಸಿದೆ. ಎಲ್‌ವಿಬಿಯನ್ನು ಸರ್ಕಾರಿ ಸ್ವಾಮ್ಯದ ಯಾವುದಾದರೂ ಬ್ಯಾಂಕ್‌ನೊAದಿಗೆ ವಿಲೀನಗೊಳಿಸಬೇಕು ಎಂದು ಅದು ಆಗ್ರಹಿಸಿದೆ.
Courtesyg: Google (photo)