ಜುಲೈ-ಆಗಸ್ಟ್ ೨೦೨೧ರೊಳಗೆ ಅಂದಾಜು ೫೦ ಕೋಟಿ ಡೋಸ್ ಕೋವಿಡ್ ಲಸಿಕೆ ಲಭ್ಯವಾಗುವ ಸಾಧ್ಯತೆಯಿದೆ. ಆದ್ಯತೆ ಮೇರೆಗೆ ಆರೋಗ್ಯ ಕಾರ್ಯಕರ್ತರು ಮತ್ತು ೬೫ಕ್ಕಿಂತ ಹೆಚ್ಚು ವಯಸ್ಸಿನವರಿಗೆ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದರು. ಎಫ್ಸಿಸಿಐ, ಎಫ್ಎಎಲ್ಒ ಆಯೋಜಿಸಿದ್ದ ವೆಬಿನಾರ್ನಲ್ಲಿ ಮಾತನಾಡಿ, ಮೊದಲಿಗೆ ಆರೋಗ್ಯ ಕಾರ್ಯಕರ್ತರು ಮತ್ತು ೬೫ ವರ್ಷ ದಾಟಿದ ಹಿರಿಯ ನಾಗರಿಕರಿಗೆ, ಬಳಿಕ ೫೦ ರಿಂದ ೬೫ ವರ್ಷದೊಳಗಿನವರಿಗೆ ಲಸಿಕೆ ನೀಡಲಾಗುತ್ತದೆ. ಆನಂತರ ೫೦ಕ್ಕಿಂತ ಕಡಿಮೆ ವಯಸ್ಸಿನವರಿಗೆ ಆರೋಗ್ಯ ತಪಾಸಣೆ ಮಾಡಿ ಲಸಿಕೆ ಹಾಕಲಾಗುತ್ತದೆ ಎಂದು ತಿಳಿಸಿದರು. ಸೋಂಕು ಮುಂದುವರಿಕೆ: ದೇಶದಲ್ಲಿ ೪೫,೫೭೬ ಹೊಸ ಪ್ರಕರಣಗಳು ಗುರುವಾರ ದಾಖಲಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ ೮೯.೫೮ ಲಕ್ಷ, ಗುಣಮುಖರಾದವರ ಸಂಖ್ಯೆ ೮೩.೮೩ ಲಕ್ಷ ಹಾಗೂ ಚೇತರಿಕೆ ಪ್ರಮಾಣ ಶೇ.೯೩.೫೮ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಒಟ್ಟು ಸಾವಿನ ಸಂಖ್ಯೆ ೧,೩೧,೫೭೮.
Courtesyg: Google (photo)