ಎರಡು ತಿಂಗಳ ಬಳಿಕ ನ.೨೦ರಂದು ದೇಶದಾದ್ಯಂತ ಪೆಟ್ರೋಲ್-ಡೀಸೆಲ್ ದರಗಳಲ್ಲಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರವನ್ನು ೧೬ ಪೈಸೆ ಹೆಚ್ಚಿಸಲಾಗಿದ್ದು, ೮೩.೯೨ ರೂಪಾಯಿಗೆ ಮಾರಾಟವಾಗಿದೆ. ಡೀಸೆಲ್ ದರ ೨೨ ಪೈಸೆ ಹೆಚ್ಚಳ ವಾಗಿದ್ದು, ೭೪.೯೧ ರೂಪಾಯಿಯಂತೆ ಮಾರಾಟವಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಅಂತರರಾಷ್ಟ್ರೀಯ ಕಚ್ಚಾ ತೈಲ ದರ ಹಾಗೂ ವಿದೇಶಿ ವಿನಿಮಯ ದರದ ಆಧಾರದ ಮೇಲೆ ದಿನವೂ ಇಂಧನ ದರ ಪರಿಷ್ಕರಣೆ ಮಾಡುತ್ತವೆ. ಆದರೆ, ಕೋವಿಡ್ ಕಾರಣದಿಂದಾಗಿ ಮಾರ್ಚ್ ೧೭ರಿಂದ ಜೂನ್ ೬ರವರೆಗೆ ಹಾಗೂ ಜೂನ್ ೩೦ರಿಂದ ಆಗಸ್ಟ್ ೧೫ರವರೆಗಿನ ಅವಧಿಯಲ್ಲಿ ಇಂಧನ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದವು.
Courtesyg: Google (photo)