ಕೋವಿಡ್ ಪರಿಣಾಮ ಐ.ಟಿ ಕ್ಷೇತ್ರದಲ್ಲಿ ಶೇ.8ರಷ್ಟು ಇಳಿಕೆ

ಕೋವಿಡ್–೧೯ ಸಾಂಕ್ರಾಮಿಕದಿಂದಾಗಿ ಭಾರತದಲ್ಲಿ ಮಾಹಿತಿ ತಂತ್ರಜ್ಞಾನದ(ಐ.ಟಿ.) ಮೇಲೆ ಮಾಡುವ ವೆಚ್ಚವು 2020ರಲ್ಲಿ ಶೇ.8.4ರಷ್ಟು ಇಳಿಕೆ ಇಳಿಕೆ ಆಗಲಿದ್ದು, 5.86 ಲಕ್ಷ ಕೋಟಿ ರೂಪಾಯಿಗಳಷ್ಟಾಗುವ ನಿರೀಕ್ಷೆ ಮಾಡಲಾಗಿದೆ ಎಂದು ಸಂಶೋಧನಾ ಸಂಸ್ಥೆ ಗಾರ್ಟ್ನರ್ ಹೇಳಿದೆ. ಕೋವಿಡ್–೧೯ ಸಾಂಕ್ರಾಮಿಕದಿಂದಾಗಿ 2020ರಲ್ಲಿ ಭಾರತದ ಉದ್ಯಮದಲ್ಲಿ ಆಗಬೇಕಿದ್ದ ಡಿಜಿಟಲೀಕರಣಕ್ಕೆ ಅಡ್ಡಿ ಉಂಟಾಗಿದೆ. ಮಾರುಕಟ್ಟೆಯಲ್ಲಿನ ಅನಿಶ್ಚಿತ ಸ್ಥಿತಿ ಮತ್ತು ನಗದು ಹರಿವು ಕಡಿಮೆ ಆಗಿರುವುದರಿಂದ ಡಿಜಿಟಲ್ ಯೋಜನೆಗಳ ಪ್ರಕ್ರಿಯೆಗೆ ತಡೆಯುಂಟಾಗಿದೆ ಎಂದು ಗಾರ್ಟ್ನರ್ ರಿಸರ್ಚ್ನ ಉಪಾಧ್ಯಕ್ಷ ಅರೂಪ್ ರಾಯ್ ಹೇಳಿದ್ದಾರೆ. ಸಾಂಕ್ರಾಮಿಕ ಸೃಷ್ಟಿಸಿದ ಈ ಪರಿಸ್ಥಿತಿಯ ಕಾರಣದಿಂದಾಗಿ ಹಲವು ಸಂಘ–ಸಂಸ್ಥೆಗಳು ತಮ್ಮ ಐ.ಟಿ. ತಂತ್ರಗಾರಿಕೆ ಮತ್ತು 2021ರಲ್ಲಿ ಐ.ಟಿ. ಮೇಲಿನ ವೆಚ್ಚ ಹೆಚ್ಚಿಸುವ ಕುರಿತು ಮರುಚಿಂತನೆ ಮಾಡುವ ಅಗತ್ಯವಿದೆ ಎಂದೂ ಅವರು ಹೇಳಿದ್ದಾರೆ. ಐ.ಟಿ ವೆಚ್ಚವು 2021ರಲ್ಲಿ ಶೇ. 6ರಷ್ಟು ಹೆಚ್ಚಾಗಲಿದ್ದು, 6.06 ಲಕ್ಷ ಕೋಟಿ ರೂ. ತಲುಪುವ ಅಂದಾಜು ಮಾಡಲಾಗಿದೆ. ಎಂಟರ್‌ಪ್ರೈಸಸ್ ಸಾಫ್ಟ್ವೇರ್, ಐ.ಟಿ. ಸೇವೆಗಳು ಮತ್ತು ಸಂವಹನ ಸೇವೆಗಳ ಮೇಲಿನ ವೆಚ್ಚವು ಕ್ರಮವಾಗಿ ಶೇ.೭ರಷ್ಟು, ಶೇ.3.7ರಷ್ಟು ಹಾಗೂ ಶೇ.4.9ರಷ್ಟು ಹೆಚ್ಚಾಗುವ ಅಂದಾಜು ಮಾಡಲಾಗಿದೆ. 2021ರಲ್ಲಿ ಡಿಜಿಟಲ್ ಇಂಡಿಯಾ ಅಭಿಯಾನವು ಹೊಸ ಎತ್ತರವನ್ನು ತಲುಪಲಿದೆ. ಎಲ್ಲಾ ವಲಯಗಳ ಉದ್ಯಮಗಳು ಐ.ಟಿ. ಮೇಲೆ ಮಾಡುವ ವೆಚ್ಚವನ್ನು ಹೆಚ್ಚಿಸಲಿವೆ. ಸಾಂಕ್ರಾಮಿಕದ ಸ್ಥಿತಿಯು ಎಲ್ಲಿಂದ ಬೇಕಿದ್ದರೂ ಕೆಲಸ ನಿರ್ವಹಿಸುವ ಯೋಜನೆಗಳನ್ನು ಪ್ರಯೋಗಿಕವಾಗಿ ಜಾರಿಗೊಳಿಸಲು ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ರಾಯ್ ತಿಳಿಸಿದ್ದಾರೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top