ಗರಿಗಟ್ಟಿದ ಎಫ್‌ಎಂಸಿಜಿ ಉದ್ಯಮ

ಜನವರಿ–ಮಾರ್ಚ್ ತ್ರೈಮಾಸಿಕದಲ್ಲಿ ಶೇ.೧೯ ರಷ್ಟು ಕುಸಿತ ಕಂಡಿದ್ದ ತ್ವರಿತವಾಗಿ ಖರೀದಿಯಾಗುವ  ಗ್ರಾಹಕ ಉತ್ಪನ್ನ (ಎಫ್‌ಎಂಸಿಜಿ)ಗಳ ಉದ್ಯಮ ಸೆಪ್ಟೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಚೇತರಿಕೆ ಕಂಡಿದೆ. ಕಳೆದ ವರ್ಷದ ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ, ಈ ವರ್ಷ ಶೇ.೧.೬ರಷ್ಟು ಬೆಳವಣಿಗೆ ಕಂಡಿದೆ ಎಂದು ನೀಲ್ಸನ್ ವರದಿ ಹೇಳಿದೆ. ಮೂರನೇ ತ್ರೈಮಾಸಿಕದಲ್ಲಿ ಲಾಕ್‌ಡೌನ್ ನಿಯಮಗಳು ಸಡಿಲಿಕೆ ಆಗಿದ್ದರಿಂದ, ಉದ್ಯಮ ಶೇಕಡ ೧.೬ರಷ್ಟು ಚೇತರಿಕೆ ಕಂಡುಕೊAಡಿದೆ. ಕರೋನಾ ಹರಡುವಿಕೆ  ಸ್ಥಿರವಾಗಿದ್ದು, ವಾಣಿಜ್ಯೋದ್ಯಮಗಳು ಮತ್ತೆ ಬಾಗಿಲು ತೆರೆದಿದ್ದು ಬೇಡಿಕೆ ಹೆಚ್ಚಲು ಕಾರಣ ಎಂದು ವರದಿ ಹೇಳಿದೆ. ಎಫ್‌ಎಂಸಿಜಿ ಉತ್ಪನ್ನಗಳ ಮಾರಾಟ ಚೇತರಿಕೆಯಲ್ಲಿ ಗ್ರಾಮಾಂತರ ಪ್ರದೇಶಗಳ ಗ್ರಾಹಕರು ಹೆಚ್ಚು ಕೊಡುಗೆ ನೀಡಿದ್ದಾರೆ. ಮೂರನೇ ತ್ರೈಮಾಸಿಕದಲ್ಲಿ ಎಫ್‌ಎಂಸಿಜಿ ಉತ್ಪನ್ನಗಳ ಮಾರಾಟ ಗ್ರಾಮಾಂತರ ಪ್ರದೇಶಗಳಲ್ಲಿ ಶೇ.೧೦.೬ರಷ್ಟು ಬೆಳವಣಿಗೆ ದಾಖಲಿಸಿದೆ.

 

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top