ಮೆಟ್ರೊ ಎರಡನೇ ಹಂತದ ಯಲಚೇನಹಳ್ಳಿ–ಅಂಜನಾಪುರ ವಿಸ್ತರಿಸಿದ ಮಾರ್ಗ ರೈಲು ಸೇವೆ ಡಿಸೆಂಬರ್ ಮೂರನೇ ವಾರ ಆರಂಭವಾಗಲಿದೆ. ರೈಲು ಸುರಕ್ಷತಾ ಆಯುಕ್ತರ ತಂಡ(ಸಿಎAಆರ್‌ಎಸ್) ಈ ಮಾರ್ಗದ ಪರಿಶೀಲನೆ ನಡೆಸಿದೆ. ತಂಡ ತಾಂತ್ರಿಕ ದೋಷಗಳನ್ನು ಪತ್ತೆ ಮಾಡಿದ್ದು, ಸರಿಪಡಿಸಲು ಸೂಚಿಸಿದೆ. ಇದಕ್ಕೆ ಒಂದೆರಡು ವಾರ ಸಮಯ ಹಿಡಿಯುತ್ತದೆ. ತಂಡ ನ.೩೦ ರಂದು ವರದಿ ನೀಡಲಿದ್ದು, ವಾಣಿಜ್ಯ ಸಂಚಾರ ಸೇವೆಗೆ ಅನುಮತಿ ನೀಡಲಿದೆ. ಡಿಸೆಂಬರ್ ಎರಡು ಅಥವಾ ಮೂರನೇ ವಾರದಲ್ಲಿ ಸೇವೆ ಪ್ರಾರಂಭಿಸುವ ಉದ್ದೇಶವಿದೆ. ಎರಡನೇ ಹಂತದಲ್ಲಿ ಸೇವೆ ನೀಡಲಿರುವ ಪ್ರಥಮ ಮಾರ್ಗ ಇದಾಗಲಿದೆ. ೬.೨೯ ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಐದು ನಿಲ್ದಾಣಗಳು ಬರುತ್ತವೆ ಎಂದು ನಿಗಮ ಹೇಳಿದೆ.
Courtesyg: Google (photo)