ಜಿಡಿಪಿ ಕುಸಿತ ಪ್ರಮಾಣ ಕಡಿಮೆ

ದೇಶದ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ)ದ ಬೆಳವಣಿಗೆ ದರ ಸತತ ಎರಡು ತ್ರೈಮಾಸಿಕಕಗಳಲ್ಲಿ ಶೂನ್ಯಕ್ಕಿಂತ ಕಡಿಮೆ ಮಟ್ಟದಲ್ಲಿದೆ. ಏಪ್ರಿಲ್–ಜೂನ್ ತಿಂಗಳಲ್ಲಿ ದಾಖಲೆ ಶೇ.–೨೩.೯ರಷ್ಟು ಕುಸಿತ ಕಂಡಿದ್ದ ಜಿಡಿಪಿ, ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ಶೇ.–೭.೫ರಷ್ಟು ಕುಸಿತ ಕಂಡಿದೆ. ಕೋವಿಡ್ ಹರಡುವಿಕೆ ತಡೆಯಲು ಹೇರಿದ್ದ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಿದ್ದರಿಂದ ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ಕುಸಿತದ ಪ್ರಮಾಣ ಕಡಿಮೆ ಆಗಿದೆ ಎನ್ನಲಾಗಿದೆ. ಜುಲೈ–ಸೆಪ್ಟೆಂಬರ್ ತ್ರೈಮಾಸಿಕಕದಲ್ಲಿ ತಯಾರಿಕಾ ವಲಯದ ಬೆಳವಣಿಗೆ ದರ ಶೂನ್ಯಕ್ಕಿಂತ ಕಡಿಮೆ ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಈ ವಲಯ ಶೇ.೦.೬ರಷ್ಟು ಬೆಳವಣಿಗೆ ದಾಖಲಿಸಿದೆ. ಆದರೆ, ಎಂಟು ಪ್ರಮುಖ ಮೂಲಸೌಕರ್ಯ ವಲಯಗಳ ಸಾಧನೆ ಅಕ್ಟೋಬರ್‌ನಲ್ಲಿ ಕಡಿಮೆ ಆಗಿರುವುದು  ಆರ್ಥಿಕ ಚೇತರಿಕೆ ಎಷ್ಟು ಸುಸ್ಥಿರ ಎಂಬ ಕಳವಳಕ್ಕೆ ಕಾರಣವಾಗಿದೆ.

ಸಿಮೆಂಟ್, ಉಕ್ಕು, ವಿದ್ಯುತ್ ಮತ್ತು ಕಚ್ಚಾತೈಲ ಉದ್ಯಮವನ್ನು ಒಳಗೊಂಡಿರುವ ಮೂಲಸೌಕರ್ಯ ವಲಯ ಅಕ್ಟೋಬರ್ ತಿಂಗಳಲ್ಲಿ ಶೇ.–೨.೫ ರಷ್ಟು ಕುಸಿತ ಕಂಡಿದೆ. ಕುಸಿತ ಸೆಪ್ಟೆಂಬರ್ ತಿಂಗಳಲ್ಲಿ ಶೇ.–೦.೧ಇತ್ತು. ಕೃಷಿ ವಲಯವು ಶೇ.೩.೪ ರಷ್ಟು ಬೆಳವಣಿಗೆ ಹಾಗೂ ವಾಣಿಜ್ಯ/ ಸೇವಾ ವಲಯವು ಶೇ.–೧೫.೬ರಷ್ಟು ಕುಸಿತ ದಾಖಲಿಸಿದೆ. ಸಾರ್ವಜನಿಕ ವೆಚ್ಚವು ಶೇ.೧೨ರಷ್ಟು ಕಡಿಮೆ ಆಗಿತ್ತು ಎಂದು ಅಂಕಿ–ಅAಶಗಳು ಹೇಳಿವೆ. ಜಿಡಿಪಿ ಕುಸಿತ ಕಡಿಮೆ ಆಗಿರುವುದಕ್ಕೆ ಕೃಷಿ ವಲಯ ಕಂಡ ಬೆಳವಣಿಗೆ ಹಾಗೂ ತಯಾರಿಕಾ ವಲಯದಲ್ಲಿ ದಾಖಲಾಗಿರುವ ಸಣ್ಣ ಚೇತರಿಕೆ ಕಾರಣ. ಆದರೆ, ನಿರ್ಮಾಣ, ಗಣಿಗಾರಿಕೆ ಮತ್ತು ಸೇವಾ ವಲಯಗಳಂತಹ ಉದ್ಯೋಗ ಸೃಷ್ಟಿಯ ಕ್ಷೇತ್ರಗಳಲ್ಲಿ ದೊಡ್ಡ ಚೇತರಿಕೆ ಕಂಡುಬAದಿಲ್ಲ ಎಂದು ಎಲ್‌ಆ್ಯಂಡ್‌ಟಿ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಅರ್ಥಶಾಸ್ತ್ರಜ್ಞೆ ಡಾ. ರೂಪಾ ಹೇಳಿದ್ದಾರೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top