ದೇಶದ ತಯಾರಿಕೆ ವಲಯದ ಚಟುವಟಿಕೆ ನವೆಂಬರ್ನಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಇದಕ್ಕೆ ಕೋವಿಡ್ ಕಾರಣ. ಬೇಡಿಕೆ ಕಡಿಮೆ ಆಗಿರುವುದರಿಂದ ತಯಾರಿಕೆ ತಗ್ಗಿಸಿದೆ ಎಂದು ಐಎಚ್ಎಸ್ ಮರ್ಕಿಟ್ ಸಂಸ್ಥೆ ಹೇಳಿದೆ.ಅಕ್ಟೋಬರ್ನಲ್ಲಿ ಐಎಚ್ಎಸ್ ಮರ್ಕಿಟ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ ೫೮.೯ ಇದ್ದದ್ದು, ನವೆಂಬರ್ನಲ್ಲಿ ೫೬.೩ಕ್ಕೆ ಇಳಿದಿದೆ. ಇದು ಮೂರು ತಿಂಗಳ ಕನಿಷ್ಠ ಮಟ್ಟ. ಆದರೆ, ಪಿಎಂಐ ೫೦ಕ್ಕಿಂತ ಹೆಚ್ಚು ಇರುವುದು ಸಕಾರಾತ್ಮಕ ಬೆಳವಣಿಗೆ ಎನ್ನಲಾಗುವುದರಿಂದ, ತಯಾರಿಕೆ ವಲಯದ ಬೆಳವಣಿಗೆ ಉತ್ತಮವಾಗೇ ಇದೆ ಎಂದು ಐಎಚ್ಎಸ್ ಮರ್ಕಿಟ್ ಸಂಸ್ಥೆ ಹೇಳಿದೆ.
ಕೋವಿಡ್ನಿಂದ ಲಕ್ಷಗಟ್ಟಲೆ ಜನ ಕೆಲಸ ಕಳೆದುಕೊಂಡಿದ್ದಾರೆ. ಹಲವರ ವೇತನ ಕಡಿತಗೊಂಡಿದೆ. ತಯಾರಿಕಾ ವಲಯದಲ್ಲಿ ಸಿಬ್ಬಂದಿ ಕಡಿತ ಮುಂದುವರಿದಿದೆ. ಆಗಸ್ಟ್ನಿಂದ ತಯಾರಿಕೆ ವೆಚ್ಚ ಹೆಚ್ಚುತ್ತಿರುವುದರಿಂದ, ಕಂಪನಿಗಳು ಮಾರಾಟ ದರ ಹೆಚ್ಚಿಸುತ್ತಲೇ ಇವೆ. ಹೀಗಾಗಿ ಹಣದುಬ್ಬರ ಶೇ.೬ ಕ್ಕಿಂತ ಹೆಚ್ಚು ಇದ್ದು, ಬಡ್ಡಿದರ ಕಡಿತ ಮಾಡಲು ಅವಕಾಶ ಸೀಮಿತವಾಗಿದೆ ಎಂದು ಹೇಳಿದೆ.
Courtesyg: Google (photo)