ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಪ್ರೀಮಿಯಂ ಗ್ರೇಡ್ ಪೆಟ್ರೋಲ್(100 ಆಕ್ಟೇನ್) ಬಿಡುಗಡೆ ಮಾಡಿದೆ. ಮೊದಲಿಗೆ ದೆಹಲಿ, ಗುರುಗ್ರಾಮ, ನೋಯಿಡಾ, ಆಗ್ರಾ, ಜೈಪುರ, ಚಂಡೀಗಢ, ಮುಂಬೈ, ಪುಣೆ ಮತ್ತು ಅಹಮದಾಬಾದಿನಲ್ಲಿ,ಆನಂತರ ಚೆನ್ನೈ, ಬೆಂಗಳೂರು, ಹೈದರಾಬಾದ್, ಕೋಲ್ಕತ್ತ ಮತ್ತು ಭುವನೇಶ್ವರದಲ್ಲಿ ಲಭ್ಯವಾಗಲಿದೆ ಎಂದು ಇಂಡಿಯನ್ ಆಯಿಲ್ ಅಧ್ಯಕ್ಷ ಶ್ರೀಕಾಂತ್ ಮಾಧವ ವೈದ್ಯ ತಿಳಿಸಿದರು.
ದೇಶದಲ್ಲಿ ಮಾರಾಟವಾಗುತ್ತಿರುವ ಪೆಟ್ರೋಲ್ ೯೧ ಆಕ್ಟೇನ್ ಆಗಿದ್ದು, ೧೦೦ ಅಥವಾ ಅದಕ್ಕಿಂತ ಹೆಚ್ಚು ಆಕ್ಟೇನ್‌ನ ಪೆಟ್ರೋಲ್ ಮಾರಾಟ ಮಾಡುವ ವಿಶ್ವದ ಆಯ್ದ ದೇಶಗಳ ಸಾಲಿಗೆ ಭಾರತವೂ ಸೇರಿಕೊಂಡಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.
Courtesyg: Google (photo)